ಇಂದು ನಾಮಪತ್ರ ಸಲ್ಲಿಸಿದ್ದ ಕಲಘಟಗಿ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ ಶಾಕಿಂಗ್ ನ್ಯೂಸ್ ಏನು ಗೊತ್ತೇ?

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು. ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಕಸರತ್ತು ನಡೆಸಿದೆ. ಆದರೆ ಇಂದು ಇಂದು ನಾಮಪತ್ರ ಸಲ್ಲಿಸಿದ್ದ ಕಲಘಟಗಿ ಬಿಜೆಪಿ ಅಭ್ಯರ್ಥಿಗೆ ಅವರು ಎಣಿಸಿರದಂತಹ ಶಾಕಿಂಗ್ ನ್ಯೂಸ್ ಸಿಕ್ಕಿದೆ, ಕೊನೆ ಕ್ಷಣದಲ್ಲಿ ಕಲಘಟಗಿ ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆಯಾಗಿದೆ. ಅಭ್ಯರ್ಥಿ ಬದಲು ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದ್ದು, ಮಹೇಶ್ ಟೆಂಗಿನಕಾಯಿ ಬದಲಿಗೆ ಸಿ.ಎಂ‌.ನಿಂಬಣ್ಣವರ್‌‌ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

ಸಿ.ಎಂ.ನಿಂಬಣ್ಣವರ್ ಬೆಂಬಲಿಗರ ಪ್ರತಿಭಟನೆಗೆ ಮಣಿದ ಬಿಜೆಪಿ ಹೈಕಮಾಂಡ್ ಕೊನೆಗೂ‌ ನಿಂಬಣ್ಣವರ್ ಅವರಿಗೆ ಬಿ ಫಾರಂ ನೀಡಿದೆ. ಕಲಘಟಗಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನಿಂಬಣ್ಣವರ್ ಅವರಿಗೆ ಟಿಕೆಟ್ ನೀಡದೆ ಮಹೇಶ ಟೆಂಗಿನಕಾಯಿಯವರಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ ಇಂದು ಹು-ಧಾ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಈರಣ್ಣ ಜಡಿ ಕೈಗೆ ಬಿ.ಎಸ್.ಯಡಿಯೂರಪ್ಪ ಬಿ ಫಾರಂ ನೀಡಿದ್ದಾರೆ.

ಮೈಸೂರಿನಲ್ಲಿ ಗ್ರಾಮೀಣ ಅಧ್ಯಕ್ಷರಿಗೆ ಬಿ ಫಾರಂ ನೀಡಿದ್ದು, ಇಂದು ರಾತ್ರಿ ಹೊತ್ತಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಬ್ಬಳ್ಳಿಗೆ ಬಿ ಫಾರಂನೊಂದಿಗೆ ಆಗಮಿಸಲಿದ್ದಾರೆ. ನಾಳೆ ಸಿ.ಎಂ.ನಿಂಬಣ್ಣವರ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಿ.ಎಂ.ನಿಂಬಣ್ಣವರ್ ಇಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಹೀಗಾಗಿ ಬಂಡಾಯಕ್ಕೆ ಹೆದರಿ ಮೊದಲು ಘೋಷಣೆ ಮಾಡಿದ್ದ ಅಭ್ಯರ್ಥಿಯನ್ನ ಬಿಜೆಪಿ ಚೆಂಜ್ ‌ಮಾಡಿದ್ದು, ಮೊದಲು ಬಿಫಾರಂ ‌ಪಡೆದಿದ್ದ ಮಹೇಶ ಟೆಂಗಿನಕಾಯಿಗೆ ಹಿನ್ನಡೆಯಾದಂತಾಗಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ ಟೆಂಗಿನಕಾಯಿ, ನನಗೆ ಹೈಕಮಾಂಡ್ ಯಾವುದೇ ಮಾಹಿತಿ ನೀಡಿಲ್ಲ. ನಾನು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಅವರಿಗೆ ಬಿ‌ ಫಾರಂ ಸಿಕ್ಕರೆ ನಾನು ನನ್ನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *