ಮೈದಾನದಲ್ಲೇ ರಾಯುಡು ಜೊತೆ ಕ್ಷಮೆ ಕೇಳಿದ ರೈನಾ! ಯಾಕೆ ಗೊತ್ತೇ? ವಿಡಿಯೋ ನೋಡಿ

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ನಲ್ಲಿ ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಅಂಬಟಿ ರಾಯುಡು ಔಟ್ ಆಗಲು ಕಾರಣರಾದ ಸುರೇಶ್ ರೈನಾ ಆನ್ ಫೀಲ್ಡ್ ನಲ್ಲೇ ಕ್ಷಮೆ ಕೋರಿದ್ದಾರೆ.

ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಇಬ್ಬರು ಉತ್ತಮ ಬ್ಯಾಟಿಂಗ್ ನಡೆಸಿ ಅರ್ಧ ಶತಕಗಳನ್ನು ಪೂರೈಸಿದ್ದರು. ಆದರೆ 17 ನೇ ಓವರ್ 4 ಎಸೆತದಲ್ಲಿ ಆನ್ ಫೀಲ್ಡ್ ನಿಂದ ರನ್ ಕದಿಯಲು ಯತ್ನಿಸಿದ ರೈನಾ, ರಾಯುಡು ರನೌಟ್ ಆಗಲು ಕಾರಣರಾದರು. ಈ ವೇಳೆ ಅರ್ಧ ಶತಕ ಪೂರೈಸಿ ಉತ್ತಮ ಲಯ ಕಂಡುಕೊಂಡಿದ್ದ ರಾಯುಡು ತೀವ್ರ ಅಸಮಾಧಾನಗೊಂಡರು. ಆದರೆ ಮರುಕ್ಷಣದಲ್ಲೇ ರೈನಾ ಕಡೆ ನೋಡಿ ನಗು ಚೆಲ್ಲಿ ಪೆವಿಲಿಯನ್ ನತ್ತ ನಡೆದರು. ಈ ವೇಳೆ ರೈನಾ, ರಾಯುಡು ಬಳಿ ಬಂದು ಕ್ಷಮೆ ಕೇಳಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರ ಆನ್ ಫೀಲ್ಡ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

https://twitter.com/iconicdeepak/status/988038632501104641?s=20

ಈ ಪಂದ್ಯದಲ್ಲಿ ರಾಯುಡು ಕೇವಲ 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವನಿಂದ 79 ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಉಳಿದಂತೆ ರೈನಾ 43 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿ ಔಟಾಗದೆ ಉಳಿದರು. ಸಿಎಸ್‍ಕೆ ತಂಡ ಈ ಪಂದ್ಯದ ಮೊದಲ 10 ಓವರ್ ಗಳಲ್ಲಿ 54 ರನ್ ಗಳಿಸಿದ್ದರೆ, ಕೊನೆಯ 10 ಓವರ್ ಗಳಲ್ಲಿ 128 ರನ್ ಗಳಿಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *