ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯನ್ನು ಮೋದಿ ಸರ್ಕಾರ ಸೃಷ್ಟಿ ಮಾಡಿದೆ: ಯಶವಂತ್ ಸಿನ್ಹಾ

ನ್ಯೂಸ್ ಕನ್ನಡ ವರದಿ-(24.04.18): ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಮೊನ್ನೆ ತಾನೇ ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬುವುದಾಗಿತ್ತು ಅವರು ರಾಜೀನಾಮೆ ನೀಡುವ ವೇಳೆ ಹೇಳಿದ ಕಾರಣ. ಪ್ರಧಾನಿ ನರೇಂದ್ರ ಮೊದಿ ಸರಕಾರದ ದುರಾಡಳಿತದ ಕುರಿತಾದಂತೆ ಆಕ್ರೋಶ ವ್ಯಕ್ತಪಡಿಸುವುದನ್ನು ಮುಂದುವರಿಸಿರುವ ಯಶವಂತ್ ಸಿನ್ಹಾ, ‘ಪ್ರಧಾನಿ ನರೇಂದ್ರ ಮೋದಿ ಸರಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ನಿವಾಸದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಿನ್ಹಾ, ತಮ್ಮ ರಾಜಿನಾಮೆಗೂ ಮತ್ತು ಪುತ್ರ ಹಾಗೂ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ಜನ್ಮದಿನಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ನಾನು ರಾಜಿನಾಮೆ ನೀಡಿದ ದಿನವೇ ಪುತ್ರನ ಜನ್ಮದಿನವಿದ್ದದ್ದು ಕೇವಲ ಕಾಕತಾಳಿಯ ಅಷ್ಟೇ ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕೆಲವೊಂದು ನಿರ್ಧಾರಗಳಿಂದಾಗಿ ದೇಶದ ಯಾವುದೇ ಸಮುದಾಯಕ್ಕೂ ಭದ್ರತೆ ಇಲ್ಲದಂತಾಗಿದೆ. ಇಂದಿರಾ ಗಾಂಧಿ ಅವರ ತುರ್ತುಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *