ಗಂಗಾವತಿಯಲ್ಲಿ ರಾಮ ಮತ್ತು ಅಲ್ಲಾಹನ ನಡುವೆ ಯುದ್ಧ ನಡೆಯುತ್ತಿದೆ, ಇಲ್ಲಿ ರಾಮನೇ ಗೆಲ್ಲುವುದು: ಚೈತ್ರಾ ಕುಂದಾಪುರ
ನ್ಯೂಸ್ ಕನ್ನಡ ವರದಿ-(24.04.18): ಕರ್ನಾಟಕದಲ್ಲಿ ಮೇ 12 ರಂದು ವಿಧಾನಸಭಾ ಚುನಾವಣೆಯು ನಡೆಯುತ್ತಿದೆ. ಈಗಾಗಲೇ ಪ್ರಚಾರವು ಬಿರುಸಾಗಿ ನಡೆಯುತ್ತಿದೆ. ಈ ನಡುವೆ ಪ್ರಚೋದನಕಾರಿ ಹೇಳಿಕೆಗಳ ಮೂಲಕವೂ ವೋಟು ಗಳಿಸುವಂತ ಕಾರ್ಯವೂ ಪ್ರಾರಂಭವಾಗಿದೆ. ಇದೀಗ ಕೊಪ್ಪಳದ ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಘಪರಿವಾರ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಗಂಗಾವತಿಯಲ್ಲಿ ರಾಮ ಮತ್ತು ಅಲ್ಲಾಹನ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿ ರಾಂನೇ ಗೆಲ್ಲುವುದು ಎಂಬ ಹೇಳಿಕೆಯನ್ನು ನೀಡಿದ್ದಾರೆ.
“ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಾರೂ ಹಿಂದೂಗಳಲ್ಲ ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಅನ್ಸಾರಿ ಹಿಂದೂ ಸಮಾಜಕ್ಕೆ ಹೆದರಿದ್ದಾರೆ. ಇಲ್ಲಿನ ವ್ಯಕ್ತಿಗಳ ಮೈಯಲ್ಲಿ ಹಿಂದೂ ರಕ್ತವು ಹರಿಯುತ್ತಿದ್ದಲ್ಲಿ ಖಂಡಿತಾ ಇಕ್ಬಾಲ್ ಅನ್ಸಾರಿಗೆ ಮತ ಹಾಕುವುದಿಲ್ಲ. ಇಕ್ಬಾಲ್ ಅನ್ಸಾರಿಗೆ ಒಂದೇ ಒಂದು ಹಿಂದೂವಿನ ಮತ ಬೀಳುವುದಿಲ್ಲ. ಈ ಬಾರಿ ನಾವು ರಾವಣ ಸಂಹಾರ ನಡೆಸುವುದು ಖಚಿತ ಎಂದು ಅವರು ಹೇಳಿದ್ದಾರೆ.