ಪ್ರತಿಷ್ಟಿತ ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗವರ್ನರ್ ಆಗಲಿದ್ದಾರೆಯೇ ರಘುರಾಮ್ ರಾಜನ್?

ನ್ಯೂಸ್ ಕನ್ನಡ ವರದಿ-(24.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡ ನೋಟು ನಿಷೇಧ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿದ್ದ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಇದೀಗ ಬ್ರಿಟನ್ ನ ಪ್ರತಿಷ್ಟಿತ ಕೇಂದ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ನ ಸಂಬಾವ್ಯ ಗವರ್ನರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಘುರಾಮ್ ರಾಜನ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಸದ್ಯ ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ ಮಾರ್ಕ್ ಕಾರ್ನಿ ಗವರ್ನರ್ ಆಗಿದ್ದಾರೆ, 2019ರ ಜೂನ್ ನಲ್ಲಿ ಮಾರ್ಕ್ ಕಾರ್ನಿ ನಿವೃತ್ತರಾಗಲಿದ್ದು, ಗವರ್ನರ್ ಹುದ್ದೆಗೆ ಸೂಕ್ತ ಮತ್ತು ಪರಿಣಿತ ವ್ಯಕ್ತಿಯನ್ನು ಹುಡುಕಲಾಗುತ್ತಿದೆ. ಈ ಕುರಿತಾದಂತೆ ಮುಂದಿನ ಗವರ್ನರ್ ಯಾರಾಗಬಹುದೆಂಬ ಸಂಭಾವ್ಯ ಪಟ್ಟಿಯನ್ನು ಫಿನಾನ್ಶಿಯಲ್ ಟೈಮ್ಸ್ ಪ್ರಕಟಿಸಿದ್ದು, ಇದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ರ ಹೆಸರು ಕೂಡಾ ಇದೆ. ರಘುರಾಮ್ ರಾಜನ್ ಅಂತಾರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ.

Leave a Reply

Your email address will not be published. Required fields are marked *