ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ ಕ್ರಿಕೆಟ್ ಸಂಸ್ಥೆ ಐಸಿಸಿ!

ನ್ಯೂಸ್ ಕನ್ನಡ ವರದಿ-(25.04.18): ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಾಗಿರುವ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಕ್ರಿಕೆಟ್ ಕುರಿತಾದಂತಹ ಪೋಸ್ಟ್ ಗಳನ್ನು ಪ್ರಕಟಿಸುತ್ತಿರುತ್ತದೆ. ಅಲ್ಲದೇ ಇದೊಂದು ಪ್ರತಿಷ್ಟಿತ ಸಂಸ್ಥೆಯಾಗಿದೆ. ಮಪನ್ನೆ ತಾನೇ ಮಹೇಂದ್ರ ಸಿಂಗ್ ಧೋನಿಗೆ ಯುವತಿಯೊಬ್ಬಳು ಪ್ರಪೋಸ್ ಮಾಡಿದ ಚಿತ್ರವನ್ನೂ ಐಸಿಸಿ ಪ್ರಕಟ ಮಾಡಿತ್ತು. ಇದೀಗ ಐಸಿಸಿ ಯ ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ಮೋದಿ ವಿರುದ್ಧದ ವೀಡಿಯೋವೊಂದನ್ನು ಪ್ರಕಟಿಸಲಾಗಿದ್ದು, ಬಳಿಕ ಡಿಲೀಟ್ ಮಾಡಲಾಗಿದೆ. ಇದರ ಹಿಂದೆ ಹ್ಯಾಕರ್ ಗಳ ಕೈವಾಡವಿದೆ ಎಂದು ತಿಳಿದು ಬಂದಿದೆ.

ಇಂದು ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆಸಾರಾಮ್ ಬಾಪು ಮತ್ತು ನರೇಂದ್ರ ಮೊದಿ ಜೊತೆಯಾಗಿ ಕಾಣಿಸಿಕೊಂಡ ವೀಡಿಯೋವೊಂದನ್ನು ವ್ಯಕ್ತಿಯೋರ್ವರು ಪೋಸ್ಟ್ ಮಾಡಿದ್ದರು. ಇದನ್ನು ನಾರಾಯಣ ನಾರಾಯಣ ಎಂದು ಬರೆದುಕೊಂಡು ಐಸಿಸಿ ಟ್ವಿಟ್ಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿತ್ತು. ಬಳಿಕ ಈ ವಿಷಯ ತಿಳಿದು ಬಂದು, ಖಾತೆಯಿಂದ ವೀಡಿಯೋ ಡಿಲೀಟ್ ಮಾಡಲಾಗಿದೆ. ಇದು ಹ್ಯಾಕರ್ಸ್ ಗಳ ಕೃತ್ಯವೆಂದು ತಿಳಿದು ಬಂದಿದೆ. ಆದರೆ ಟ್ವಿಟ್ಟರ್ ನಾದ್ಯಂತ ಬಳಕೆದಾರರು ಟ್ರೋಲ್ ಗಳ ಮೇಲೆ ಟ್ರೋಲ್ ಸುರಿಸುತ್ತಿದ್ದಾರೆ.

https://twitter.com/adityakalluraya/status/989039985486696453

https://twitter.com/VivPrab/status/989053264976138240

https://twitter.com/IamMayaSharma/status/989038812352401408

Leave a Reply

Your email address will not be published. Required fields are marked *