ಕಳಪೆ ಪ್ರದರ್ಶನದ ಕಾರಣ ತನ್ನ 2.82 ಕೋಟಿ ರೂ. ಸಂಬಳ ಬೇಡವೆಂದ ಗಂಭೀರ್!

ನ್ಯೂಸ್ ಕನ್ನಡ ವರದಿ-(25.04.18): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಕಳಪೆ ಪ್ರದರ್ಶನ ತೋರುತ್ತಿರುವ ಕಾರಣ ಇಂದು ಸಂಜೆ ನಾಯಕ ಗೌತಮ್ ಗಂಭೀರ್ ತಮ್ಮ ನಾಯಕತ್ವವನ್ನು ತ್ಯಜಿಸಿದ್ದಾಗಿ ತಿಳಿಸಿದ್ದರು. ಇದೀಗ ಅದರ ಬೆನ್ನಲ್ಲೇ, ಡೆಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕನಾಗಿ ನಾನೇ ಜವಾಬ್ದಾರನಾಗಿದ್ದು, ಆದ್ದರಿಂದ ಈ ಸಾಲಿನ ಸಂಬಳ 2.82ಕೋಟಿ ರೂ.ಯನ್ನು ನಾನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ ಇತಿಹಾಸದಲ್ಲೇ ಇದೊಂದು ಪ್ರಥಮ ಘಟನೆಯಾಗಿದ್ದು, ತನ್ನ ತಂಡದ ಕಳಪೆ ಪ್ರದರ್ಶನದ ಕಾರಣದಿಂದಾಗಿ ಇಡೀ ಟೂರ್ನಮೆಂಟ್ ನ ಸಂಬಳ ನಿರಾಕರಿಸುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಗೌತಮ್ ಗಂಭೀರ್ ಕೇವಲ ನಾಯಕತ್ವ ಮಾತ್ರ ತ್ಯಜಿಸಿದ್ದು, ಡೆಲ್ಲಿ ತಂಡದ ಸಾಮಾನ್ಯ ಆಟಗಾರನಾಗಿ ಯಾವುದೇ ಸಂಭಾವನೆಯನ್ನೂ ಸ್ವೀಕರಿಸದೇ ತಮ್ಮ ಪ್ರದರ್ಶನ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *