ರೈಲಿನಿಂದ ಹೊರಗೆ ಹಾರಿ ಅತ್ಯಾಚಾರದಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಪೇದೆ!

ನ್ಯೂಸ್ ಕನ್ನಡ ವರದಿ-(26.04.18): ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಅತ್ಯಾಚಾರದ ವಿರುದ್ಧವಾಗಿ ಹಲವು ಮಂದಿ ಧ್ವನಿಯೆತ್ತುತ್ತಲೂ ಇದ್ದಾರೆ. ಆದರೆ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರನ್ನು ರಕ್ಷಿಸುವ ಪ್ರಯತ್ನಗಳು ಎಲ್ಲೂ ಕಂಡು ಬಂದಿರಲಿಲ್ಲ. ಇದೀಗ ತಮಿಳುನಾಡಿನಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ಅತ್ಯಾಚಾರಕ್ಕೆ ಒಳಗಾಗಲಿದ್ದ ಮಹಿಳೆಯನ್ನು ಪೊಲೀಸ್ ಪೇದೆಯೋರ್ವ ರಕ್ಷಿಸಿದ ಘಟನೆ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಪೊಲೀಸ್ ಪೇದೆಯು ರೈಲಿನಿಂದ ಹೊರಗಡೆ ಹಾರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಚೆನ್ನೈನ ಪಾರ್ಕ್ ಟೌನ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆಯು ಸಂಭವಿಸಿದ್ದು, ರೈಲ್ವೇ ರಕ್ಷಣಾ ಪಡೆಯ ಶಿವಾಜಿ ಎಂಬ ಪೊಲೀಸ್ ಪೇದೆಯು ಸೋಮವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಕರ್ತವ್ಯದ ನಿಮಿತ್ತ ವೇಲಚ್ಚೇರಿಯಿಂದ ಚೆನ್ನೈ ಬೀಚ್ ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಬೋಗಿಯಿಂದ ಜೋರಾಗಿ ಚೀರಾಟ ಕೇಳಿ ಬಂದಿತ್ತು. ಇದು ಲೋಕಲ್ ರೈಲು ಆಗಿದ್ದ ಕಾರಣ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಹೋಗುವ ವ್ಯವಸ್ಥೆ ಇರಲಿಲ್ಲ.

ರೈಲು ಇನ್ನೊಂದು ನಿಲ್ದಾಣ ಸಮೀಪಿಸುವಾಗ ನಿಧಾನವಾಗುತ್ತಿದ್ದಂತೆಯೇ ಪೊಲಿಸ್ ಪೇದೆಯು ಕುಡಲೇ ರೈಲಿನಿಂದ ಹೊರಕ್ಕೆ ಹಾರಿ, ಮಹಿಳಾ ಬೋಗಿಗೆ ಹತ್ತಿದ್ದಾರೆ. ಅಲ್ಲಿ 25ರ ಹರೆಯದ ವ್ಯಕ್ತಿಯೋರ್ವ ಮಹಿಳೆಯೋರ್ವರನ್ನು ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದ. ಕೂಡಲೇ ಪೊಲೀಸ್ ಪೇದೆ ಶಿವಾಜಿ ಆತನನ್ನು ದೂರಕ್ಕೆ ತಳ್ಳಿ ಮಹಿಳೆಯನ್ನು ರಕ್ಷಿಸಿದರು. ಪೊಲೀಸರು ಕೂಡಲೇ ಆರೋಪಿಗೆ ಥಳಿಸಿ ಬಂಧಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಪೇದೆಯ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಆದರೆ ಇಂಥಹಾ ಸಾಹಸಮಯ ಕಾರ್ಯಕ್ಕೆ ರೈಲ್ವೇ ಪೊಲೀಸ್ ಇಲಾಖೆಯು ಶಿವಾಜಿಯ ತಂಡಕ್ಕೆ ಕೇವಲ 5,000ರೂ. ನಗದು ಬಹುಮಾನ ನಿಡಿದ್ದು ಅಸಮಧಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *