ತನ್ನ ನಾಯಕತ್ವದ ಪ್ರಥಮ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ನ್ಯೂಸ್ ಕನ್ನಡ ವರದಿ : ಒಬ್ಬ ಒಳ್ಳೆಯ ನಾಯಕನೇ ತನ್ನ ತಂಡವನ್ನು ನಿವ೯ಹಿಸುವುಲ್ಲಿ ಸಕ್ಷಮ. ಇದಕ್ಕೆ ಸಾಟಿಯಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ರವರ ಪ್ರದಶ೯ನ ಅಮೋಘವಾದದ್ದು. ನಾಯಕನಾಗಿ ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ಗಳಿಸಿರುವ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಕೇವಲ 40 ಎಸೆತಗಳಲ್ಲಿ 93 ರನ್ಗಳಿಸಿ ಅಜೇಯರಾಗಿ, ನಾಯಕನಾಗಿ ಡೆಬ್ಯು ಪಂದ್ಯದಲ್ಲೇ ಅತಿ ಹೆಚ್ಚು ರನ್ಗಳಿಸಿರುವ ಹೊಸ ದಾಖಲೆಯನ್ನು ಶ್ರೇಯಸ್ ಅಯ್ಯರ್ ನಿರ್ಮಿಸಿದ್ದಾರೆ.
ನಿನ್ನೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಕೇವಲ 40 ಎಸೆತಗಳಲ್ಲಿ 10 ಸಿಕ್ಸರ್, 3 ಬೌಂಡರಿ ಸೇರಿದಂತೆ ಒಟ್ಟು 93ರನ್ಗಳಿಸಿ ಅಜೇಯರಾಗಿ ಹೊಸ ದಾಖಲೆ ನಿರ್ಮಿಸಿದರು. ಇನ್ನು ಇದರ ಮಧ್ಯೆ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಸುರೇಶ್ ರೈನಾ ಬಳಿಕ ಐಪಿಎಲ್ನಲ್ಲಿ ನಾಯಕ ಸ್ಥಾನ ವಹಿಸಿದ ನಾಲ್ಕನೇ ಅತಿ ಕಿರಿಯ ಆಟಗಾರ ಎಂಬ ಸಾಧನೆಗೂ ಕೂಡ ಶ್ರೇಯಸ್ ಪಾತ್ರರಾಗಿದ್ದಾರೆ. ನಾಯಕರಾಗಿ ಡೆಬ್ಯು ಪಂದ್ಯದಲ್ಲೇ ಗರಿಷ್ಠ ರನ್ ಗಳಿಸಿದ್ದ ಆ್ಯಡಂ ಗಿಲ್ಕ್ರಿಸ್ಟ್, ಮುರಳಿ ವಿಜಯ್ ಹಾಗೂ ಆ್ಯರೋನ್ ಫಿಂಚ್ ರವರ ದಾಖಲೆ ಮುರಿದು ಗರಿಷ್ಟ ರನ್ ಗಳಿಸಿದ ಸಾಧಕರಾಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ.