ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ಸಿಯೋಮಿಯ MI A2ಹೊಸ ಸ್ಮಾರ್ಟ್‍ಫೋನ್!

ನ್ಯೂಸ್ ಕನ್ನಡ ವರದಿ-(29.04.18): ಟೆಲಿಕಾಂ ಸಂಸ್ಥೆಗಳ ವಿಶ್ಲೇಷಣೆ ಪ್ರಕಾರ ಭಾರತದಲ್ಲಿ ಸದ್ಯ ಹೆಚ್ಚು ಮಾರಾಟದಲ್ಲಿರುವುದು ಚೀನಾ ನಿರ್ಮಿತ ಕ್ಸಿಯೋಮಿ ಫೋನ್ ಗಳಾಗಿವೆ. ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯ ಬಹುಪಾಲು ಭಾಗ ಅಂದರೆ ಸುಮಾರು 34% ಕ್ಸಿಯೋಮಿ ತನ್ನ ಪಾರುಪತ್ಯ ಸಾಧಿಸಿದೆ. ಕ್ಸಿಯೋಮಿMI A1 ಮತ್ತು ನೋಟ್ 5 ಪ್ರೋ ಸ್ಮಾರ್ಟ್ ಫೋನ್ ಗಳು ಸದ್ಯ ಆನ್ ಲೈನ್ ನಲ್ಲೂ ಲಭ್ಯವಿಲ್ಲ. ಬಿಡಗಡೆಯಾದ ನಿಮಿಷಗಳಲ್ಲೇ ಎಲ್ಲಾ ಫೋನ್ ಗಳೂ ಮಾರಾಟವಾಗುತ್ತಿದೆ. ಇದೀಗ ಕ್ಸಿಯೋಮಿ ಭಾರತದಲ್ಲಿ ತನ್ನ ಹೊಸ ಆವೃತ್ತಿ MI A2 ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ.

ಈ ಫೋನ್ ನಲ್ಲಿ ಹಲವು ವಿಶೇಷತೆಗಳಿವೆ. ಹಿಂಬದಿಯಲ್ಲಿ ಎರಡು ಕ್ಯಾಮರಾಗಳನ್ನು ನೀಡಿದ್ದು, ಒಂದು 20ಮೆಗಾಪಿಕ್ಸೆಲ್ ಮತ್ತು ಇನ್ನೊಂದು 12 ಮೆಗಾಪಿಕ್ಸೆಲ್ ಸಾಮಥ್ರ್ಯವನ್ನು ಹೊಂದಿದೆ. ಇನ್ನು ಸೆಲ್ಫೀ ಕ್ಯಾಮರಾ ಕೂಡಾ ಉತ್ತಮ ಗುಣಮಟ್ಟದ 20ಮೆಗಾಪಿಕ್ಸೆಲ್ ಹೊಂದಿದೆ. ಈ ಎರಡೂ ಕ್ಯಾಮರಾಗಳೂ ಕೂಡಾ ಕೆಲವು ವಿಶೇಷತೆಗಳಿಂದ ಕೂಡಿದೆ. ಡಿಎಸ್ಸೆಲ್ಲಾರ್ ಕ್ಯಾಮರಾಗಳ ಮೂಲಕ ಕ್ಲಿಕ್ಕಿಸುವ ಫೋಟೊಗಳಿಗಿಂತ ಉತ್ತಮ ಗುಣಮಟ್ಟದಲ್ಲಿ ಫೋಟೊ ಕ್ಲಿಕ್ಕಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಫೋನ್ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮುಂಬದಿ ಕ್ಯಾಮರಾ: 20 ಮೆಗಾಪಿಕ್ಸೆಲ್
ಹಿಂಬದಿ ಕ್ಯಾಮರಾ: 20 ಮತ್ತು 12 ಮೆಗಾಪಿಕ್ಸೆಲ್
ಬ್ಯಾಟರಿ: 3010 MAH
ಪ್ರೊಸೆಸರ್: ಕ್ವಾಲ್ಕಂ ಸ್ನಾಪ್ ಡ್ರಾಗನ್ 660
ಸ್ಟೋರೇಜ್: 32ಜಿಬಿ, 64ಜಿಬಿ, 128 ಜಿಬಿ

Leave a Reply

Your email address will not be published. Required fields are marked *