ಚೀನಾ ಪ್ರವಾಸದ ವೇಳೆ ಮೋದಿ ಧರಿಸಿದ ಜಾಕೇಟಿನ ಬೆಲೆಯೆಷ್ಟು?; ರಮ್ಯಾ ಟ್ವೀಟ್ ನೋಡಿ!

ನ್ಯೂಸ್ ಕನ್ನಡ ವರದಿ : ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟರ್ ನಲ್ಲಿ ಎದುರಾಳಿಗಳ ಕಾಲೆಳೆಯುವುದು ಸಾಮಾನ್ಯ. ಈಗ ವಿಶೇಷವಾಗಿ ಪ್ರಧಾನಿ ಮೋದಿಯವರು ತೊಟ್ಟ ಲೋರೋ ಪೈನಾ ಜಾಕೆಟ್ ಬಗ್ಗೆ ರಮ್ಯಾ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

ಚೀನಾ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ 17 ಸಾವಿರ ಯೂರೋ ಮೌಲ್ಯದ ಶ್ಯೂಟ್‌ ತೊಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿರುವ ರಮ್ಯಾ, ತಮ್ಮ ಟ್ವೀಟ್‌ನಲ್ಲಿ ಸೋ ಫ್ಯಾನ್ಸಿ. ನೀವು ತೊಟ್ಟ ಲೋರೋ ಪೈನಾ ಜಾಕೇಟ್‌‌ ನಾನು ಇಷ್ಟ ಪಡುತ್ತೀನಿ. ಇದರ ಬೆಲೆ ಕೇವಲ 17 ಸಾವಿರ ಯೂರೋ. ಮೋದಿ ಈ ಜಾಕೇಟ್‌ ಖರೀದಿಸಲು ಯಾರ್ ಕ್ರೆಡಿಟ್‌ ಕಾರ್ಡ್‌ ಬಳಸಿದಿರಿ ? ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆಲೆ ಭಾರತೀಯ ದರದಲ್ಲಿ 13 ಲಕ್ಷದ 63 ಸಾವಿರ ರೂಪಾಯಿ ಆಗುತ್ತದೆ. ಈ ಹಿನ್ನೆಲೆಯಲ್ಲಿ ರಮ್ಯಾ ಅವರ ಈ ಟ್ವೀಟ್‌ ಭಾರಿ ಸದ್ದು ಸೃಷ್ಟಿಸಿದೆ.

Leave a Reply

Your email address will not be published. Required fields are marked *