ಮೋದಿಯವರೇ, ನೀವು ಅಡ್ವಾಣಿಯವರಿಗೆ ಎಷ್ಟು ಗೌರವ ಕೊಟ್ಟಿದ್ದೀರಿ ಎಂದು ದೇಶವೇ ನೋಡಿದೆ!: ಪರಮೇಶ್ವರ್
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರ ಕೊನೆಯ ಹಂತಕ್ಕೆ ತಲುಪಿದ್ದು, ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಬಲ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಇಂದು ಮಾಜಿ ಪ್ರಧಾನಮಂತ್ರಿ ದೇವೇಗೌಡರ ಬಗ್ಗೆ ಕಾಂಗ್ರೆಸ್ ಪಕ್ಷದವರು ಅಗೌರವ ನೀಡಿದ್ದರು ಮತ್ತು ತಾನು ಹೇಗೆ ಅವರಿಗೆ ಗೌರವ ನೀಡುತ್ತೇನೆ ಎಂದು ಜೆಡಿಎಸ್ ವರಿಷ್ಠರನ್ನು ಹೊಗಳಿದ್ದಾರೆ.
ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪರಮೇಶ್ವರ್ ‘ನಮಗೆ ಗೌಡರಿಗೆ ಗೌರವ ನೀಡುವುದು ತಿಳಿದಿದೆ. ನೀವು ಹತ್ತಿ ಬಂದ ಏಣಿಯ ಮರೆಯದಿರಿ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯಂತಹ ಹಿರಿಯ ನಾಯಕರಿಗೆ ನೀವು ನೀಡಿದ ಗೌರವ ಇಡೀ ದೆಶವೇ ನೋಡಿದೆ’ ಎಂದಿದ್ದಾರೆ.
"ಮಾನ್ಯ ಮೋದಿಯವರೇ, ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಹಿರಿಯರಿಗೆ ಗೌರವ ನೀಡುವುದು ನಮಗೆ ಚೆನ್ನಾಗಿ ತಿಳಿದಿದೆ.
ಆದರೆ ಮೊದಲು ನೀವು ಹತ್ತಿ ಬಂದ ಏಣಿಗೆ ಗೌರವ ನೀಡುವ ನೀಡುವುದನ್ನು ಮರೆಯದಿರಿ.
ಎಲ್.ಕೆ ಅಡ್ವಾಣಿಯಂತಹ ಹಿರಿಯ ನಾಯಕರಿಗೆ ನೀವು ನೀಡಿರುವ ಗೌರವ ಇಡೀ ದೇಶವೇ ನೋಡಿದೆ": @DrParameshwara#2Reddy1Yeddy
— Karnataka Congress (@INCKarnataka) May 1, 2018