ಯುವಕ – ಯುವತಿಯರ ಬದುಕಿನ ಕನಸ್ಸನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟ ಪ್ರೆಸಿಡೆಂನ್ಸಿ ಪೌಂಡೇಶನ್
ನ್ಯೂಸ್ ಕನ್ನಡ ವರದಿ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪ್ರೆಸಿಡೆಂನ್ಸಿ ಗ್ರೂಪ್ ಆಫ್ ಸ್ಕೂಲ್ ಇದರ ಅಧೀನದಲ್ಲಿ ಶ್ರೀಮತಿ ಕೌಸರ್ ನಿಸಾರ್ ಆರಂಭಿಸಿರುವ ಪ್ರೆಸಿಡೆಂನ್ಸಿ ಪೌಂಡೇಶನ್ ಮೂಲಕ ವೃತ್ತಿ ತರಬೇತಿ ಪೂರೈಸಿದ ಸುಮಾರು ನೂರು ವಿಧ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಟ್ಯಾನಿ ರೋಡ್ ನಲ್ಲಿರುವ ಸಂಸ್ಥೆಯ ಸಮಾಜ ಸೇವಾ ಕೇಂದ್ರದಲ್ಲಿ ನಡೆಯಿತು. ಬಡ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಸಂಪೂರ್ಣ ಉಚಿತವಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಕೊಡಿಸುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಮೊಬೈಲ್ ಟೆಕ್ನೀಷಿಯನ್ ತರಬೇತಿ, ಬ್ಯೂಟೀಶಿಯನ್ ತರಬೇತಿ, ಟೈಲರಿಂಗ್ ತರಬೇತಿ ಸೇರಿದಂತೆ ಮಾರ್ಕೆಟಿಂಗ್ ಸ್ಕಿಲ್ ಡೆವಲಪ್ಪ್ ಮೆಂಟ್ ಕೋರ್ಸ್ ನ್ನು ನೀಡಲಾಗುತ್ತಿದೆ.
ಸಮಾಜವು ಪ್ರೆಸಿಡೆಂನ್ಸಿ ಸ್ಕೂಲ್ ನ್ನು ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಿದೆ ಅದೇ ರೀತಿ ಪ್ರಸಿಡೆಂನ್ಸಿ ಪೌಂಡೇಶನ್ ಕೂಡ ಬೆಳೆದು ಮಾನವ ಕಲ್ಯಾಣಕ್ಕೆ ದೊಡ್ಡ ಮಟ್ಟದಲ್ಲಿ ಸೇವೆ ನೀಡಲು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಸಂಸ್ಥೆಯ ಸ್ಥಾಪಕಿ ಶ್ರೀಮತಿ ಕೌಸರ್ ನಿಸಾರ್ ವಿನಂತಿಸಿದರು. ಪ್ರಸಿಡೆಂನ್ಸಿಯ ಮೂಲಕ ನಾವು ಒಂದು ಬಿಂದು ಹನಿಯಷ್ಟು ಸೇವೆ ಮಾಡಿದ್ದೇವೆ ಎಲ್ಲರೂ ಸಹಕರಿಸಿದರೆ ಅದು ಸಾವಿರಾರು ಜನರ ಬದುಕಿಗೆ ಬೆಳಕಾಗಬಹುದು ಎಂದು ಹೇಳಿದ ಅವರು ನಮ್ಮ ತೃಪ್ತಿಗಾಗಿ ಮತ್ತು ಯುವ ತಲೆಮಾರಿನ ಉಜ್ವಳ ಬದುಕಿಗಾಗಿ ನಮ್ಮಿಂದಾಗುವ ಕೊಡುಗೆ ನೀಡಲು ಉದ್ದೇಶ ಮಾಡಿದ್ದೇವೆ, ಯುವಕ ಯುವತಿಯರು ನೀವು ಸ್ವಾಭಿಮಾನಿ ಬದುಕು ಕಟ್ಟುವ ಮೂಲಕ ಸಂಸಾರ ಮತ್ತು ಸಮಾಜಕ್ಕೆ ಪ್ರಯೋಜನವಾಗಬೇಕು,ನಮ್ಮ ಉದ್ದೇಶ ಸರ್ವ್ ದ ಸೊಸೈಟೀ ಆಂಡ್ ಸರ್ವ್ ದ ಹ್ಯುಮಾನಿಟೀ ಆಗಿದೆ. ಇಲ್ಲಿ ಜಾತಿ – ಧರ್ಮ – ವರ್ಗ ನೊಡದೆ ತಮ್ಮ ಬದುಕಿನ ಕನಸ್ಸನ್ನು ಪ್ರಾಯೋಗಿಕಗೊಳಿಸಲು ನಮ್ಮಿಂದಾದ ನೆರವು ಕೊಡುತ್ತೇವೆ ಎಂದು ವಿಧ್ಯಾರ್ಥಿಗಳನ್ನು ಕೌಸರ್ ನಿಸಾರ್ ಹುರಿದುಂಬಿಸಿ ಎಲ್ಲಾ ಅಭ್ಯರ್ಥಿಗಳಿಗೂ ವಿಶೇಷ ಉಡುಗೊರೆಯನ್ನು ನೀಡಿ ಹಾರೈಸಿದರು.
ಪ್ರೆಸಿಡೆಂನ್ಸಿ ಪೌಂಡೇಶನ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ಬಾಲ್ ಅಹ್ಮದ್ ಮಾತನಾಡಿ ಅತ್ಯುತ್ತಮ ಸೌಲಭ್ಯಗಳು , ನುರಿತ ತರಬೇತುದಾರರು ಹಾಗೇ ವೃತ್ತಿಪರವಾಗಿ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಆರಂಭಿಸಿ ಅವರ ಉಧ್ಯೋಗ ಭರವಸೆಯನ್ನು ಈಡೇರಿಸುವವರೆಗೆ ನಾವು ವಿಧ್ಯಾರ್ಥಿಗಳ ಜೊತೆ ಇರುತ್ತೇವೆ. ಅವರನ್ನು ಎಲ್ಲಾ ಕ್ಷೇತ್ರದಲ್ಲೂ ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ನಮ್ಮ ಪ್ರಯತ್ನ ಸಾಗುತ್ತದೆ ಎಂದರು.
ಬೆಂಗಳೂರಿನ ಪ್ರಮುಖ ಪ್ರದೇಶದಿಂದ ಬಂದು ಇಲ್ಲಿ ವೃತ್ತಿ ತರಬೇತಿ ನಡೆಸಿ ಯಶಸ್ವಿಯಾದವರನ್ನು ಅಭಿನಂದಿಸುವುದರ ಜೊತೆಗೆ ಮುಂದಿನ ವರ್ಷಕ್ಕೆ ಇನ್ನೂ ಹೆಚ್ಚು ಯುವಕ ಯುವತಿಯರಿಗೆ ನೆರವಾಗಲು ಪ್ರೆಸಿಡೆಂನ್ಸಿ ಪೌಂಡೇಶನ್ ಉದ್ದೇಶ ಮಾಡಿದೆ. ಕಾರ್ಯಕ್ರಮದಲ್ಲಿ ನಫೀಸಾ ತನ್ವೀರ್ ಅಹ್ಮದ್ ಭಾಗವಹಿಸಿ ತನ್ನ ಮಾತೃಶ್ರೀಯವರಾದ ಕೌಸರ್ ನಿಸಾರ್ ಅವರ ಉದ್ದೇಶದ ಯಶಸ್ವಿ ಸಂತೋಷ ತಂದಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.