ಮೋದಿ ವಿರುದ್ಧ ‘ಯಾವಾಗ’ ದಾಳಿ ಆರಂಭಿಸಿದ ಸಿದ್ದು! ಏನಿದು ದಾಳಿ ಗೊತ್ತೇ? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. 2014 ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಸಾಮಾಜಿಕ ಜಾಲತಾಣದ ಪ್ರಚಾರ ಆ ನಂತರ ನಡೆದ ಪ್ರತೀ ಚುನಾವಣೆಯ ಬಿಜೆಪಿಯ ಬಹುದೊಡ್ಡ ಶಕ್ತಿಯಾಗಿತ್ತು. ಇದರಿಂದ ಪಾಠ ಕಲಿತ ಕಾಂಗ್ರೆಸ್ ಇದೀಗ ಸಾಮಾಜಿಕ ಜಾಲತಾಣವನ್ನು ಪ್ರಭಾವಿ ರೂಪದಲ್ಲಿ ಬಳಸಲು ಆರಂಭಿಸಿದೆ.

ಅದರಲ್ಲೂ ಕಳೆದ ಕೆಲವು ತಿಂಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಹಳಷ್ಟು ಸಕ್ರಿಯವಾಗಿ ತೀಕ್ಷ್ಣ ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಖಡಕ್ ಉತ್ತರ ನೀಡುತ್ತಿದ್ದರು. ನೇರವಾಗಿ ಪ್ರಧಾನಿಯವರ ಕಾಲೆಳೆಯುವ ಅವರಿಗೆ ಟಾಂಗ್ ನೀಡುವ ದೇಶದ ಕೆಲವೇ ರಾಜಕಾರಣಿಗಳಲ್ಲಿ ಅವರೊಬ್ಬರಾಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ತಯಾರಿಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ರೀತಿ ಕೊನೆಯ ದಿನಗಳಲ್ಲಿ ಮ್ಯಾಜಿಕ್ ಮಾಡಲು ಬಿಜೆಪಿಗೆ ಶಕ್ತಿ ತುಂಬಲು ಸ್ವತಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.

ರಾಷ್ಟ್ರೀಯ ನಾಯಕರ ಪ್ರವೇಶದೊಂದಿಗೆ  ರಾಜ್ಯದ ವಿಧಾನಸಭಾ ಚುನಾವಣಾ ಅಖಾಡ ಅಗ್ನಿಕುಂಡದಂತಾಗಿದೆ. ನಾಯಕರ ಭಾಷಣದಲ್ಲಿ ಆರೋಪ-ಪ್ರತ್ಯಾರೋಪಗಳಾದರೆ, ಸೋಶಿಯಲ್ ಮೀಡಿಯಾದದಲ್ಲಿ ಸವಾಲುಗಳದ್ದೇ ಆಟ.  ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

‘ಯಾವಾಗ’ ಎಂಬ ಒಕ್ಕಣೆಯೊಂದಿಗೆ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ಧ್ವಜಕ್ಕೆ ಅಂಗೀಕಾರ ಯಾವಾಗ ನೀಡುತ್ತೀರಿ? ಕನ್ನಡಿಗ-ಪರ ಬ್ಯಾಂಕಿಂಗ್ ಪರೀಕ್ಷೆಗಳಿಗೆ ನಿಯಮಗಳನ್ನು ಯಾವಾಗ ರೂಪಿಸುತ್ತೀರಿ? ಮಹಾದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ಯಾವಾಗ ವಹಿಸುತ್ತೀರಿ? ಎಸ್‌ಡಿಆರ್‌ಎಫ್ ಪರಿಷ್ಕರಣೆ ಯಾವಾಗ ಮಾಡುತ್ತೀರಿ, ರಾಜ್ಯದ ರತ್ನವಾಗಿರುವ ಬಿಇಎಂಎಲ್‌ನ ಬಂಡವಾಳ ಹಿಂತೆಗೆತವನ್ನು ಯಾವಗಾ ನಿಲ್ಲಿಸುತ್ತೀರಿ, ರಫೇಲ್ ಡೀಲ್‌ನಿಂದ ಎಚ್‌ಎಎಲ್‌ಗೆ ಆಗಿರುವ ಅನ್ಯಾಯವನ್ನು ಯಾವಾಗ ಸರಿಪಡಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *