ಬಿಜೆಪಿ ನಾಯಕರೇ ದಲಿತರ ಮನೆಯ ಊಟದ ನಾಟಕ ನಿಲ್ಲಿಸಿ!: ಆರ್‍ಎಸ್‍ಎಸ್ ಟೀಕೆ

ನ್ಯೂಸ್ ಕನ್ನಡ ವರದಿ:- ದಲಿತರ ಕುಟುಂಬಗಳ ಜೊತೆ ಊಟ ಮಾಡುವ ಮೂಲಕ ಅವರನ್ನು ಒಲಿಸಿಕೊಳ್ಳುವ ಬಿಜೆಪಿ ಯತ್ನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್) ಟೀಕಿಸಿದೆ. ದಲಿತರ ಮನೆಯಲ್ಲಿ ಊಟ ಮಾಡಿ ಅಲ್ಲಿಗೆ ಮಾಧ್ಯಮದವರನ್ನು ಕರೆತಂದು ಪ್ರಚಾರ ಪಡೆಯವುದನ್ನು ಬಿಜೆಪಿ ನಿಲ್ಲಿಸಬೇಕಿದೆ. ಅದರ ಬದಲು ನಿರಂತರವಾಗಿ ದಲಿತರನ್ನು ಭೇಟಿಯಾಗಿ ಅವರ ಕಷ್ಟ-ಸುಖಗಳು ಮತ್ತು ನೋವು-ನಲಿವುಗಳಿಗೆ ಸ್ಪಂದಿಸಬೇಕು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ಮಾಡಿದ್ದಾರೆ.

ಬಿಜೆಪಿ ಮುಖಂಡರು ದಲಿತರ ಮನೆಗಳಿಗೆ ಹೋಗುವುದಕ್ಕಿಂತ ತಮ್ಮ ಮನೆಗಳಿಗೇ ಅವರನ್ನು ಆಹ್ವಾನಿಸಬೇಕು ಹಾಗೂ ಜಾತೀಯತೆ ನಿರ್ಮೂಲನೆಗೆ ನೆರವಾಗಬೇಕೆಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *