ಶಾಸಕ ಹ್ಯಾರಿಸ್ ಎದುರು ಚುನಾವಣೆಗೆ ನಿಲ್ಲಲು ಮುಂದಾದ ವ್ಯಕ್ತಿ ಬಗ್ಗೆ ನಿಮಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ : ಕೆಲವೊಮ್ಮೆ ಹಿರಿಯರು ಹೇಳಿದ ಮಾತುಗಳೆಲ್ಲವೂ ಸತ್ಯವಾಗಿ ನಮ್ಮ ಎದುರೇ ನಡೆಯುವಂತಿವೆ. ಶ್ರೀ ಸಾಮಾನ್ಯ ಎಂದರೆ ಯಾವಾಗ ಬೇಕಾದರೂ ಏನನ್ನಾದರೂ ಮಾಡಬಲ್ಲವೆಂಬುವದಿಕ್ಕೆ ಬೆಂಗಳೂರಿನ ಟೀ ಮಾರುವ ಸೈಯ್ಯದ್ ಆಸೀಫ್ ಬುಖಾರಿ ಎಂಬ ಸಾಧಾರಣ ಮನುಷ್ಯ. ಈಗ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಹ್ಯಾರಿಸ್ ನ ಕ್ಷೇತ್ರವಾದ ಶಾಂತಿನಗರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಎ ಪದವೀಧರರಾಗಿರುವ ಸೈಯ್ಯದ್ ಆಸೀಫ್ ಬುಖಾರಿಗೆ ಇದು ಆರನೇ ಚುನಾವಣೆ. 2 ಬಾರಿ ಎಮ್ಮೆಲ್ಲೆ, 2 ಬಾರಿ ಕಾರ್ಪೊರೇಷನ್, 1 ಬಾರಿ ಎಂಪಿ ಎಲೆಕ್ಷನನ್ನು ತಮ್ಮ ಚಾಯ್ ಅಂಗಡಿಯ ದುಡಿಮೆ ಹಣದಲ್ಲೆ ಮಾಡಿದ್ದಾರೆ. ಯಾರಿಗೂ ಹಣ ಹಂಚದೇ ಸೇವೆಗೊಂದು ಅವಕಾಶ ಕೊಡಿ ಬದಲಾವಣೆ ನಾನು ತರುತ್ತೇನೆನ್ನುವ ಘೋಷಣೆಯೊಂದಿಗೆ ಮತ ಬೇಟೆಗೆ ತೊಡಗಿದ್ದಾರೆ. ಟೀ ಮಾರಿ ಗಳಿಸಿದ ಹಣದಲ್ಲಿ ಈ ಬಾರಿ 2 ಲಕ್ಷವನ್ನು ಚುನಾವಣೆಗೆ ಖರ್ಚು ಮಾಡ್ತಿದ್ದಾರಂತೆ. ಟೀ ಅಂಗಡಿಯಲ್ಲಿ ದುಡಿಯುತ್ತಲೇ ಬಿಡುವಿನ ವೇಳೆಯಲ್ಲಿ ತಮ್ಮ ಬೈಕ್​ನಲ್ಲಿ ಪ್ರಚಾರಕ್ಕೆ ಹೊರಡುವ ಬುಕಾರಿ ಒಂದು ದಿನ ಶಾಂತಿನಗರ, ಇನ್ನೊಂದು ದಿನ ಹೆಬ್ಬಾಳದಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಬದಲಾವಣೆಯ ಮಹತ್ವಾಕಾಂಕ್ಷೆಯಲ್ಲಿ ಚುನಾವಣಾ ಕಣದಲ್ಲಿರುವ ಬುಖಾರಿ ಅವರನ್ನು ಬೆಂಬಲಿಸುವವರ ಸಂಖ್ಯೆನೂ ಕಡಿಮೆಯಿಲ್ಲ. ಇವರ ಈ ದಿಟ್ಟತನ ಮೆರೆಯುವಂತಹ ಶ್ಲಾಘನೀಯವಾಗಿದೆ.

Leave a Reply

Your email address will not be published. Required fields are marked *