ಯಾರೆಲ್ಲಾ ಬಿಜೆಪಿಗೆ ಮತ ಹಾಕಲ್ವಾ ಅವರ ಕೈಕಾಲು ಕಟ್ಟಿ ತಂದು ಮತ ಹಾಕಿಸಿ!: ಯಡಿಯೂರಪ್ಪ ಧಮ್ಕಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಮೀರಿ ಜನರ ಓಲೈಕೆಯಲ್ಲಿ ತೊಡಗಿದ್ದು. ಇಂದು ಬೆಳಗಾವಿಯ ಕಿತ್ತೂರು ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ವಿವಾದಾತ್ಮಕ ಹೇಳಿಕೆ ನೀಡಿ ಜನರ ಹುಬ್ಬೇರಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಯಡಿಯೂರಪ್ಪ ಬಿಜೆಪಿಗೆ ಯಾರು ಮತ ನೀಡುವುದಿಲ್ಲ ಎಂದನಿಸುತ್ತದೆಯೋ ಅಂಥವರ ಕೈ ಕಾಲು ಕಟ್ಟಿ ಕರೆತಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಬೇಕು ಎಂದು ಆವಾಜ್ ಹಾಕಿದ್ದಾರೆ. ಇದೀಗ ಇವರ ಈ ಪ್ರಚಾರ ಭಾಷಣದ ವೀಡಿಯೋ ಸುದ್ದಿ ವಾಹಿನಿಯಲ್ಲಿ ಬಂದಿದ್ದೇ ವೈರಲಾಗಿದ್ದು, ಯಾವ ರೀತಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡುತ್ತೆ ಕಾದು ನೋಡಬೇಕು.

Leave a Reply

Your email address will not be published. Required fields are marked *