ಗಂಡ ಇಲ್ಲದಾಗ ಫೇಸ್ಬುಕ್ ಗೆಳೆಯನನ್ನು ಮನೆಗೆ ಕರೆದ ಮಹಿಳೆ! ಮುಂದೇನಾಯ್ತು ಗೊತ್ತೇ?

ನ್ಯೂಸ್ ಕನ್ನಡ ವರದಿ: ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಹೊಸ ಹೊಸ ಗೆಳೆಯ ಗೆಳತಿಯರು ನಮಗೆ ಸಿಗುತ್ತಾರೆ, ಆದರೆ ಚೆನ್ನೈನಲ್ಲಿ ಇದೇ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪರಿಚಯವಾದ ಗೆಳೆತನ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದೆ.

ಆದರೆ ಈ ಘಟನೆಯ ಸತ್ಯಾಸತ್ಯತೆ ಹೊರಬಂದ ರೀತಿ ಮಾತ್ರ ತುಂಬಾ ಸ್ವಾರಸ್ಯಕರವಾಗಿದೆ. ರೆಡ್ ಹಿಲ್ಸ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ತನ್ನ ಪತಿ ಮನೆಯಲ್ಲಿ ಇಲ್ಲದ ವೇಳೆ ಕಳ್ಳತನವಾಗಿದೆ. ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎಂದು ಪತಿ ಸಮೇತ ಠಾಣೆಗೆ ತೆರಳಿ ಕಂಪ್ಲೇಂಟ್ ಕೊಟ್ಟಿದ್ದಳು. ಪೊಲೀಸರರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಹೇಳಿಕೆಗಳು ಪೊಲೀಸರಿಗೆ ಅನುಮಾನ ಮೂಡಿಸಿವೆ. ಬಳಿಕ ಮಹಿಳೆಯನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಅಸಲಿ ಕಥೆ ಬಿಚ್ಚಿಕೊಂಡಿದೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೆಲದಿನಗಳ ಹಿಂದೆಯಷ್ಟೇ ಈ ಮಹಿಳೆಗೆ ಯುವಕನೋರ್ವ ಪರಿಚಯವಾಗಿದ್ದು, ಗೆಳೆಯರಾಗಿ ಇಬ್ಬರೂ ಚಾಟ್ ಮಾಡಲು ಆರಂಭಿಸಿದ್ದರು. ಬಳಿಕ ಪತಿ ಮನೆಯಲ್ಲಿ ಇಲ್ಲದ ವೇಳೆ ಮೊದಲ ಬಾರಿಗೆ ಫೇಸ್‌ಬುಕ್‌ ಗೆಳೆಯನನ್ನು ಮಹಿಳೆ ಆಹ್ವಾನಿಸಿದ್ದಳು. ಆದರೆ ಮಹಿಳೆಯ ಮನೆಗೆ ಬಂದ ಆಗಂತಕ ಆಕೆಯ ಮೈಮೇಲಿದ್ದ ಚಿನ್ನಾಭರಣದ ಸಮೇತ ದೋಚಿ ಪರಾರಿಯಾಗಿದ್ದಾನೆ. ಆದರೆ ಈ ಅಸಲಿ ವಿಷಯವನ್ನು ಪತಿಗೆ ಹೇಳಲಾಗದೆ ಮಹಿಳೆ ಸುಳ್ಳು ಕಥೆ ಹೆಣೆದಿದ್ದಳು. ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಪತಿಯನ್ನು ನಂಬಿಸಿದ್ದಳು. ಆದರೆ ಪೊಲೀಸರ ತನಿಖೆಯಿಂದ ಪ್ರಕರಣ ಬಯಲಾಗಿದೆ.

ಫೇಸ್‌ಬುಕ್ ಗೆಳೆಯ ತಂದಿಟ್ಟ ಸಂಕಟದಿಂದ ಮಹಿಳೆ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಇನ್ನು ಫೇಸ್‌ಬುಕ್ ಗೆಳೆಯ ಮನೋಜ್ ಹಾಗೂ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೋಜ್ ಈ ಹಿಂದೆಯೂ ಫೇಸ್‌ಬುಕ್ ಮೂಲಕ ಇಂಥ ಕೃತ್ಯ ಎಸಗಿರುವುದು ಬಯಲಾಗಿದೆ.

Leave a Reply

Your email address will not be published. Required fields are marked *