ಮುಧೋಳದ ನಾಯಿಗಿರುವಷ್ಟು ನಿಯತ್ತು, ದೇಶಭಕ್ತಿ ಕಾಂಗ್ರೆಸ್ಸಿಗರಿಗಿಲ್ಲ: ಪ್ರಧಾನಿ ಮೋದಿ

ನ್ಯೂಸ್ ಕನ್ನಡ ವರದಿ-(06.05.18) ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೊದಿ ಕರ್ನಾಟಕದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಪೂರ್ವಜರಿಂದ ಏನಾದರೂ ಕಲಿಯುವುದು ಬೇಡ ಅಂದ್ರೆ ಬೇಡ! ಕನಿಷ್ಠ ನಮ್ಮ ಬಾಗಲಕೋಟೆಯ ಮುಧೋಳ ನಾಯಿಗಳಿಂದಲಾದರೂ ಏನಾದರೂ ಕಲಿತುಕೊಳ್ಳಿ, ಮುಧೋಳ ನಾಯಿಗಳಿಂದಲೂ ಪಾಠ ಕಲಿಯುತ್ತಾರೆ ಎನ್ನುವ ಭರವಸೆ ನನಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡಿದರು. ನಿಮ್ಮ ಪೂರ್ವಜರು, ಮಹಾತ್ಮಾ ಗಾಂಧಿ ಯವರಿಂದ ದೇಶಭಕ್ತಿ ಕಲಿಯದಿದ್ದರೂ ಕಾಂಗ್ರೆಸ್ ನವರು ಮುಧೋಳ ನಾಯಿಗಳಿಂದಾದರೂ ದೇಶಭಕ್ತಿ ಕಲಿಯಬೇಕು. ನಾಯಿಗಳಿಂದಲೂ ಕಾಂಗ್ರೆಸ್ ನವರು ದೇಶಭಕ್ತಿ ಕಲಿಯುತ್ತಾರೆ ಎಂಬ ವಿಶ್ವಾಸ ನನಗಿಲ್ಲ ಎಂದರು.

Leave a Reply

Your email address will not be published. Required fields are marked *