ಪೊಲೀಸರು ಬೆನ್ನಟ್ಟುತ್ತಿದ್ದ ಕ್ರಿಮಿನಲ್ ನನ್ನ ಈ ಅಜ್ಜ ಹಿಡಿದದ್ದು ಹೇಗೆ? ವೈರಲ್ ವೀಡಿಯೋ ನೋಡಿ..
ನ್ಯೂಸ್ ಕನ್ನಡ ವರದಿ : ಜನ ಸಾಮಾನ್ಯರಲ್ಲಿ ನಂಬಲಾಗದ ಶಕ್ತಿಗಳಿರುತ್ತವೆ. ಕೆಲವೊಮ್ಮೆ ಸಕ್ಷಮರಿಂದ ಆಗದಂತಹ ಕೆಲವು ಕೆಲಸಗಳು ಸಾಮಾನ್ಯರಿಂದ ಆಗುತ್ತವೆ. ಇದಕ್ಕೊಂದು ಉತ್ತಮ ನಿದರ್ಶನ ನೀಡುವ ಒಂದು ಘಟನೆಯು ಕೊಲಂಬಸ್ ನಲ್ಲಿ ನಡೆದಿದೆ. ಶಂಕಿತ ಆರೋಪಿಯೊಬ್ಭನನ್ನು ಬೆನ್ನಟ್ಟಿಕೊಂಡು ಬರುವಾಗ ಮಾರ್ಗ ಮಧ್ಯೆ ನಿಂತಿದ್ದ ವೃದ್ಧ ವ್ಯಕ್ತಿಯೊಬ್ಬರು ಸಂದಭ೯ಕ್ಕೆ ಅನುಗುಣವಾಗಿ ಕೇವಲ ಕಾಲು ಅಡ್ಡ ಹಾಕಿ ಆರೋಪಿಯನ್ನು ನೆಲಕ್ಕೆ ಉರುಳಿ ಬೀಳುವಂತೆ ಮಾಡಿದ್ದಾರೆ.
ಏಪ್ರಿಲ್ 3 ರಂದು ವೃದ್ಧ ವ್ಯಕ್ತಿಯಾದ ಬಿಲ್ ರವರು ತಮ್ಮ ಮೊಮ್ಮಗಳೊಂದಿಗೆ ನಗರದ ಗೃಂಥಾಲಯಕ್ಕೆ ಆಗಮಿಸಿದ್ದರು. ಗೃಂಥಾಲಯದಿಂದ ಹಿಂದಿರುಗುವ ವೇಳೆ ಪೊಲೀಸ್ ವಾಹನದ ಸೈರನ್ ಕೇಳಿಸಿದ್ದರಿಂದ ರಸ್ತೆ ದಾಟದೇ ಅಲ್ಲಿಯೇ ನಿಂತುಕೊಂಡಿದ್ದಾರೆ. ಅಷ್ಟರಲ್ಲಿಯೇ ಎಡಗಡೆಯಿಂದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದನ್ನು ನೋಡಿದ್ದಾರೆ. ಯುವಕ ತಮ್ಮ ಹತ್ತಿರ ಬರುತ್ತಿದ್ದಂತೆ ಒಂದು ಹೆಜ್ಜೆ ಹಿಂದೆ ಬಂದು ಅವನಿಗೆ ಕಾಲು ಅಡ್ಡ ಹಾಕಿ ಬೀಳಿಸಿದ್ದಾರೆ. ವೇಗದಲ್ಲಿ ಓಡಿ ಬರುತಿದ್ದ ಆರೋಪಿ ಆಯತಪ್ಪಿ ಕೆಲ ದೂರ ಹೋಗಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಸಹಾಯ ಮಾಡುವ ಉದ್ದೇಶಕ್ಕಾಗಿ ಬಿಲ್ ಈ ಒಂದು ಕಾಯ೯ಕ್ಕೆ ಮುಂದಾಗಿದ್ದು ತಿಳಿದು ಬಂದಿದೆ. ಬಂಧಿತ ಶಂಕಿತ ಆರೋಪಿಯಿಂದ ಗ್ಲಾಕ್ 9 ಎಂ.ಎಂ ಪಿಸ್ತೂಲ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತಾವು ಮಾಡಿದ ಒಂದು ಸಹಾಯದಂತೆಯೇ ಎಲ್ಲರೂ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಬೇಕೆಂದು ವೃದ್ಧ ವ್ಯಕ್ತಿ ಮನವಿ ಮಾಡಿಕೊಂಡಿದ್ದಾರೆ.