ಬಳ್ಳಾರಿ ಬಿಜೆಪಿಯ ರೆಡ್ಡಿ ಪರವಾಗಿ ಪ್ರಚಾರದಲ್ಲಿ ನಟ ಸುದೀಪ್ ಹೇಳಿದ್ದೇನು ಗೊತ್ತೇ? ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿದ್ದಾಜಿದ್ದಿನ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಮೀರಿ ಜನರ ಓಲೈಕೆಯಲ್ಲಿ ತೊಡಗಿದ್ದು. ಜನರನ್ನು ಸೆಳೆಯುವ ಉದ್ದೇಶದಿಂದ ಚಿತ್ರನಟರನ್ನೂ ಪ್ರಚಾರಕ್ಕೆ ಬಳಸುವುದು ಇದೀಗ ಭರ್ಜರಿಯಾಗಿ ನಡೆಯುತ್ತಿದೆ. ಯಶ್, ದರ್ಶನ್ ಮತ್ತು ಸುದೀಪ್ ಈಗಾಗಲೇ ರಾಜ್ಯದಲ್ಲಿ ಹಲವೆಡೆ ಸಾರ್ವಜನಿಕ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಪರ ಶ್ರೀರಾಮುಲು ಜೊತೆಗೂಡಿ ಭರ್ಜರಿ ಪ್ರಚಾರ ಮಾಡಿದರು.

https://youtu.be/mSl_uXfU-VE

ಈ ವೇಳೆ ಮಾತನಾಡಿದ ಸುದೀಪ್, ನಮ್ಮದು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಅಲ್ಲ. ನಮ್ಮ ಪಕ್ಷ ಸಿನಿಮಾ. ಆದರೆ, ಯಾರು ಉತ್ತಮ ಕೆಲಸ ಮಾಡ್ತಾರೆ ಅವರ ಪರ ನಮ್ಮ ಪ್ರಚಾರ, ಬೆಂಬಲ ಎಂದು ಪ್ರಚಾರಕ್ಕೆ ಬಂದ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಶ್ರೀರಾಮುಲು ಅವರು ನಮ್ಮ ಹಳೆ ಸ್ನೇಹಿತ. 20 ವರ್ಷಗಳಿಂದ ನಮ್ಮ ಒಡನಾಟ ಇದೆ. ಅವರು ಒಳ್ಳೆಯ ಕೆಲಸಗಾರರು. ಅಷ್ಟೇ ಅಲ್ಲ ತ್ವರಿತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಅವರಂತೆ ಸೋಮಶೇಖರ್‌ ರೆಡ್ಡಿ ಅವರೂ ಸಹ ಈ ಹಿಂದೆ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಮಾಡುತ್ತಾರೆ ಎಂಬ ಭರವಸೆ ಮೇಲೆ ಪ್ರಚಾರ ಮಾಡಲು ಬಂದಿರುವೆ. ಅವರನ್ನು ಗೆಲ್ಲಿಸಿ ಎಂದು ಸುದೀಪ್ ಕರೆ ಕೊಟ್ಟರು.

Leave a Reply

Your email address will not be published. Required fields are marked *