ಮೇ 17ರಂದು ನಾನು ಸಿಎಂ, ಬಸನಗೌಡ ಪಾಟೀಲ ಮಂತ್ರಿಯಾಗಿ ಅಧಿಕಾರಿ ಸ್ವೀಕಾರ!: ಯಡಿಯೂರಪ್ಪ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಮೀರಿ ಜನರ ಓಲೈಕೆಯಲ್ಲಿ ತೊಡಗಿದ್ದು. ರಾಜಕೀಯ ನಾಯಕರು ಜನರಿಗೆ ಆಶ್ವಾಸನೆಗಳ ಸರಮಾಲೆಯನ್ನೇ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ ಯಡಿಯೂರಪ್ಪ, ಮೇ 17 ರಂದು ನಾನು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ರಾಜ್ಯದ ಚುನಾವಣೆಯಲ್ಲಿ ಉತ್ತರಪ್ರದೇಶದ ಫಲಿತಾಂಶ ಬರಲಿದೆ. ಮೇ 12 ಮತದಾನ ಇರುವ ಹಿನ್ನೆಲೆಯಲ್ಲಿ 3 ದಿನ ಮಾತ್ರ ಪ್ರಚಾರ ನಡೆಯಲಿದೆ. ಒಂದು ಕಡೆ ಪ್ರಧಾನಿ, ಮತ್ತೊಂದು ಕಡೆ ಅಮಿತ್‌ ಶಾ ಹಾಗೂ ಇನ್ನೊಂದೆಡೆ ತಾವು ಪ್ರವಾಸ ಮಾಡುತ್ತಿದ್ದು, 40 ವರ್ಷಗಳ ರಾಜಕೀಯದಲ್ಲಿ ತಾವು ಇಂಥ ಜನ ಬೆಂಬಲ ಕಂಡಿರಲಿಲ್ಲ ಎಂದರು. ಈ ಬಾರಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರೈತರ, ನೇಕಾರರ ಸಾಲ ಮನ್ನಾ ಮಾಡುತ್ತೇವೆ. ಆದರೆ ಕಾಂಗ್ರೆಸ್‌ನಲ್ಲಿ ಖರ್ಗೆ, ಪರಮೇಶ್ವರ್‌, ಸಿದ್ದರಾಮಯ್ಯ ನಡುವೆ ಒಗ್ಗಟ್ಟಿಲ್ಲ. ನಿನ್ನೆ ಖರ್ಗೆ ಮೈಸೂರಿನಲ್ಲಿ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿರುವುದೇ ಸಾಕ್ಷಿ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *