ಪಾದಚಾರಿ ಮಾರ್ಗಕ್ಕೆ ನುಗ್ಗಿದ ಕಾರು: ನಾಲ್ಕು ಮಂದಿ ಮೃತ್ಯು, 30 ಮಂದಿಗೆ ಗಾಯ!
ನ್ಯೂಸ್ ಕನ್ನಡ ವರದಿ-(07.04.18): ಕಾರ್ ಒಂದು ಜನರು ನಡೆದುಕೊಂಡು ಹೋಗುವ ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದು, ಕಾರು ಹರಿದು ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆಯು ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ ನಡೆದಿದೆ. ಸುಮಾರು 4 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿರುವ ಘಟನೆಯು ನಡೆದಿದೆ. ಬರ್ಲಿನ್ ನಗರದ ಪಶ್ಚಿಮ ಭಾಗದಲ್ಲಿ ಈ ಘಟನೆಯು ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ನಡುವೆ ಕಾರು ಚಾಲಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಅಪಘಾತ ನಡೆದ ಸ್ಥಳದಲ್ಲಿ ಹಲವಾರು ಪೋಲೀಸ್ ಮತ್ತು ಅಗ್ನಿಶಾಮಕ ವಾಹನಗಳು ಗುಂಪು ಸೇರಿರುವ ಚಿತ್ರಗಳು ಸ್ಥಳೀಯ ದೂರದರ್ಶನದಲ್ಲಿ ಪ್ರಸಾರವಾಗಿದೆ. ಶಸ್ತ್ರಸಜ್ಜಿತ ಪೋಲಿಸರು ಸ್ಥಳವನ್ನು ಸುತ್ತುವರಿದಿದ್ದು ತನಿಖೆಗೆ ಅನುಕೂಲವಾಗಲು ನಗರದ ಕೇಂದ್ರದಿಂದ ದೂರ ತೆರಳುವಂತೆ ಸ್ಥಳೀಯರನ್ನು ಮನವಿ ಮಾಡಿದ್ದಾರೆ. ಇದೊಂದು ಭಯೋತ್ಪಾದಕ ದಾಳಿಯೇ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಸ್ಥಳದಲ್ಲಿನ ಸನ್ನಿವೇಶ ಗಮನಿಸಿದರೆ ಭಯೋತ್ಪಾದಕ ದಾಳಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭದ್ರತಾ ಮೂಲಗಳು ಹೇಳಿವೆ.