ಮಹಮ್ಮದ್ ಸಿರಾಜ್ ದಾಳಿಗೆ ಸನ್‍ರೈಸರ್ಸ್ ತತ್ತರ: ಆರ್ಸಿಬಿ ಗೆಲುವಿಗೆ ಸುಲಭ ಸವಾಲು!

ನ್ಯೂಸ್ ಕನ್ನಡ ವರದಿ: ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪ್ರಮುಖ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದೆ. ಎರಡೂ ತಂಡಕ್ಕೆ ಇಂದು ಪ್ರಥಮ ಸುತ್ತಿನ ಪಂದ್ಯವಾಗಿದ್ದಾದರು ಆರ್​ಸಿಬಿ ಸೋತರೆ ಪ್ಲೇ ಆಫ್ ಆಸೆಯನ್ನು ಸಂಪೂರ್ಣ ಕೈ ಬಿಡಬೇಕಾಗುತ್ತದೆ. ಇತ್ತ ಹೈದರಾಬಾದ್‍ಗು ಇಂದಿನ ಪಂದ್ಯ ಮುಖ್ಯವಾಗಿದ್ದು, ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಲಿದೆ.

ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಆರ್​ಸಿಬಿ ತಂಡಕ್ಕೆ ವೇಗದ ಬೌಲರ್‌ಗಳಾದ ಮಹಮ್ಮದ್ ಸಿರಾಜ್ ಮತ್ತು ಸೌಥಿ ಆಸರೆಯಾದರು. ಬಿಗು ಬೌಲಿಂಗ್ ದಾಳಿ ನಡೆಸಿದ ಮಹಮ್ಮದ್ ಸಿರಾಜ್ ನಾಲ್ಕು ಓವರ್‌ಗಳಲ್ಲಿ ಕೇವಲ 25 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು ಮತ್ತು ಸೌಥಿ 30 ರನ್‌ಗಳಿಗೆ ಮೂರು ವಿಕೆಟ್ ಪಡೆದರು.

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ವಿಲಿಯಮ್ಸನ್ ಮತ್ತು ಶಾಕಿಬ್ ಅಲ್ ಹಸನ್ ಉತ್ತಮ ಪ್ರದರ್ಶನ ನೀಡಿದ ಕಾರಣ ತಂಡವು 20 ಓವರ್‌ಗಳಲ್ಲಿ 146 ರನ್‌ಗಳಿಸಿ ಬೆಂಗಳೂರು ತಂಡಕ್ಕೆ 147 ರನ್ ಗುರಿ ನೀಡಿದೆ.

ಬೇರೆ ಪಂದ್ಯಗಳಿಗೆ ಹೋಲಿಸಿದರೆ ಇದು ಸಣ್ಣ ಮೊತ್ತದ ಗುರಿಯಾಗಿದ್ದು. ಆರ್ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published. Required fields are marked *