ಕರ್ನಾಟಕ ಚುನಾವಣೆ: TV 5 ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ! ಯಡ್ಡಿಯೇ ಫೆವಿರಿಟ್ ಸಿಎಂ!
ನ್ಯೂಸ್ ಕನ್ನಡ ವರದಿ: ದೇಶದಾದ್ಯಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿದ್ದು, ಅತ್ತ ಹಲವಾರು ಸುದ್ದಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ದಿನಕ್ಕೊಂದು ಹೊಸ ಹೊಸ ಸಮೀಕ್ಷೆ ಬಿಡುಗಡೆ ಮಾಡುತ್ತಿದ್ದು, ಇಂದು ಸೀ ಫೋರ್ ಸಮೀಕ್ಷೆ ನಂತರ ಎಬಿಪಿ ನ್ಯೂಸ್ ಸಮೀಕ್ಷೆ ಬಿಡುಗಡೆ ಮಾಡಿತ್ತು, ಇದೀಗ ಟಿವಿ5 ಸಂಸ್ಥೆ ತಮ್ಮ ಸಮೀಕ್ಷೆ ವರದಿ ಬಿಡುಗಡೆ ಮಾಡಿದೆ. ಟಿವಿ 5 ಸಮೀಕ್ಷೆಯ ಪ್ರಕಾರ ಬಿಜೆಪಿ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ಗೆ 70 ಮತ್ತು ಜೆಡಿಎಸ್ಗೆ 40 ಸ್ಥಾನ ದೊರೆಯಲಿದೆ. ಈ ಅಂಕಿಸಂಖ್ಯೆಗಳಲ್ಲಿ 5 ಕ್ಷೇತ್ರ ಹೆಚ್ಚು ಅಥವಾ ಕಡಿಮೆ ಸಾಧ್ಯತೆ ಆಗಬಹುದು ಎಂದು ಟಿವಿ 5 ಹೇಳಿದೆ.
ರಾಜ್ಯದ ಜನರ ನೆಚ್ಚಿನ ಮುಖ್ಯಮಂತ್ರಿ, ಸರ್ಕಾರದ ಯೋಜನೆಗಳ ಯಶಸ್ಸು, ಮುಂದಿನ ಪ್ರಧಾನಿ, ಲಿಂಗಾಯತ ಧರ್ಮ ಇನ್ನೂ ಹಲವು ವಿಷಯಗಳನ್ನು ಇಟ್ಟುಕೊಂಡು ಟಿವಿ5 ಸಮೀಕ್ಷೆ ಮಾಡಿದ್ದು ಜನರ ಮೆಚ್ಚಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಸಮೀಕ್ಷೆ ಹೇಳುತ್ತಿದೆ. ಟಿವಿ5 ಸಮೀಕ್ಷೆ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆಗಬೇಕೆಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು 38.11% ಜನರ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲೆಂದು 37.03% ಅಭಿಪ್ರಾಯಪಟ್ಟಿದ್ದಾರೆ. ಕುಮಾರಸ್ವಾಮಿ ಪರ ಒಲವು ತೋರಿಸಿರುವುದು 18.33% ಅಷ್ಟೆ. ಬಿಜೆಪಿಯು 36%-38% ಮತ ಗಳಿಸಿದರೆ. ಕಾಂಗ್ರೆಸ್ ಪಕ್ಷ 33%-35% ಮತಗಳಿಸಲಿದೆಯಂತೆ. ಜೆಡಿಎಸ್ 20%-22% ಮತ ಬುಟ್ಟಿಗೆ ಹಾಕಿಕೊಂಡರೆ, ಇತರರು 6%-8% ಮತ ಗಳಿಸಲಿದ್ದಾರಂತೆ