ಇಯರ್ ಫೋನ್ ಹಾಕಿ ನಿದ್ರಿಸಿದ ಪರಿಣಾಮವೇನು ಗೊತ್ತೇ? ಓದಿ, ತಪ್ಪದೇ ಶೇರ್ ಮಾಡಿ..
ನ್ಯೂಸ್ ಕನ್ನಡ ವರದಿ: ಈ ಮುಂದುವರಿದ ಆಧುನಿಕ ತಂತ್ರಜ್ಞಾನ ಕಾಲದಲ್ಲಿ ನಾವು ನಮಗೆ ಇಷ್ಟವಾಗುವ ಹವ್ಯಾಸವನ್ನು ತುಂಬಾ ಸುಲಭವಾಗಿ ರೂಢಿಮಾಡಿಕೊಳ್ಳಲು ತಂತ್ರಜ್ಞಾನದ ಸಹಾಯ ಪಡೆಯುತ್ತೇವೆ. ಹಿಂದಿನ ಕಾಲದಿಂದಲೂ ಹಲವಾರು ಸಂಗೀತ ಪ್ರಿಯರು ರಾತ್ರಿ ಸಂಗೀತ ಕೇಳುತ್ತಾ ನಿದ್ರೆಗೆ ಜಾರುತ್ತಿದ್ದರು. ಹಿಂದೆ ಅಜ್ಜಿಯರು ತಾಯಂದಿರು ಹಾಡುತ್ತಿದ್ದರೆ ನಂತರ ಟೇಪ್ ರೆಕಾರ್ಡರ್ ಮೂಲಕ ಸಂಗೀತ, ಹಾಡು ಕೇಳಲು ಆರಂಭಿಸಿದರು. ಇದೀಗ ಇನ್ನಷ್ಟು ತಂತ್ರಜ್ಞಾನ ಬೆಳೆದ ಕಾರಣ ಸಂಗೀತಪ್ರಿಯ ಯುವ ಜನತೆ ತಮ್ಮ ಮೊಬೈಲ್ ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಸಂಗೀತ ಕೇಳುತ್ತಾ ನಿದ್ರಿಸುವುದು ನಾವು ಸಾಮಾನ್ಯವಾಗಿ ನೋಡುತ್ತೇವೆ.
ಆದರೆ ಈ ಒಂದು ಸುದ್ದಿಯನ್ನು ಓದಿದ ನಂತರ ನಾವು ಇಯರ್ ಫೋನ್ ಹಾಕಿಕೊಂಡು ಮಲಗುವ ಮುನ್ನ ಮುನ್ನೆಚ್ಚರಿಕೆ ಹೊಂದಿರಬೇಕು ಎಂದು ಅರಿವು ಮೂಡಿಸುತ್ತೆ. ಚೆನ್ನೈನಲ್ಲಿ ವಾಸಿಸುತ್ತಿರುವ 46 ಹರೆಯದ ಫಾತಿಮಾರಿಗೆ ಕಿವಿಗೆ ಇಯರ್ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ಅಭ್ಯಾಸ. ಆದರೆ ಅದೇ ಅಭ್ಯಾಸದ ಕಾರಣದಿಂದ ಸಾವನ್ನಪ್ಪಿದ್ದಾರೆ. ರವಿವಾರ ಆಕೆ ಇದೇ ರೀತಿ ಇಯರ್ಫೋನ್ಗಳನ್ನು ಕಿವಿಗೆ ಸಿಕ್ಕಿಸಿ ಮಲಗಿದ್ದ ಸಂದರ್ಭ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.
ಎಂದಿನಂತೆ ಮಲಗಿದ್ದ ತನ್ನ ಪತ್ನಿಯನ್ನು ಪತಿ ಅಬ್ದುಲ್ ಕಲಾಂ ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸ್ಪಂದಿಸದೇ ಇರುವುದನ್ನು ಗಮನಿಸಿದ ಕಲಾಂ ಕೂಡಲೇ ಫಾತಿಮಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿನ ವೈದ್ಯರು ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಫಾತಿಮಾ ಇಯರ್ಫೋನ್ ಹಾಕಿ ಮಲಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಕೆಗೆ ವಿದ್ಯುತ್ ತಗುಲಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ರಾತ್ರಿ ಮಲಗುವಾಗ ಇಯರ್ ಫೋನ್ ಹಾಕಿಕೊಂಡು ಮಲಗುವುದನ್ನು ಆದಷ್ಟು ಕಡಿಮೆ ಮಾಡಬೇಕು, ಇಯರ್ ಫೋನ್ ಹಾಕಿಕೊಂಡರೂ ಮೊಬೈಲ್ ಚಾರ್ಜ್ ಗೆ ಇಟ್ಟು ನಿದ್ರೆಗೆ ಜಾರಬಾರದು. ತಮ್ಮ ಸಣ್ಣ ತಪ್ಪು ಜೀವಕ್ಕೇ ಮಾರಕವಾಗಬಹುದು. ಈ ದುರಾದೃಷ್ಟಕರ ಘಟನೆಯ ಕುರಿತು ನಿಮ್ಮ ಸ್ನೇಹಿತರ ಸಂಬಂಧಿಕರ ಜೊತೆ ವಿಷಯ ಹಂಚಿ ಜಾಗೃತಿ ಮೂಡಿಸಿ, ಸೇಫ್ ಆಗಿರಿ..