ಬ್ಯಾಂಕ್ ಪಾಸ್ ಬುಕ್ ತೋರಿಸಿ ₹15 ಲಕ್ಷ ಯಾವಾಗ ಬರುತ್ತೆ ಎಂದು ಮೋದಿಯನ್ನು ಕೇಳಿ!: ರಾಜ್ ಬಬ್ಬರ್
ಕಾಪು : ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ ಅಭಿವೃದ್ಧಿಯ ಹರಿಕಾರ ವಿನಯಕುಮಾರ್ ಸೊರಕೆಯವರನ್ನು ಪ್ರಚಂಡ ಬಹುಮತವನ್ನು ಗೆಲ್ಲಿಸಿ ಎಂದು ಉತ್ತರಪ್ರದೇಶದ ಲೋಕ ಸಭಾ ಸದಸ್ಯ ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಹಿರಿಯಡ್ಕ ಬಸ್ ಸ್ಟಾಂಡ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು,ದೇಶದ ಕಾವಲುಗಾರ ಫೈಲ್ ಆಗಿದ್ದಾರೆ. ಮುಂದಿನ ಬಾರಿ ದೇಶದ ಜನ ಈ ಕಾವಲುಗಾರನನ್ನು ಕೆಲಸಕ್ಕೆ ಇಟ್ಟು ಕೊಳ್ಳಲ್ಲ ಎಂದು ರಾಜ್ ಬಬ್ಬರ್ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ವಿಧಾನ ಸಭಾ ಚುನಾವಣೆ ಸಿದ್ಧರಾಮಯ್ಯ ವರ್ಸಸ್ ಮೋದಿ ಆಗಿದೆ. ಮೋದಿ ಚುನಾವಣಾ ಪ್ರಚಾರಕ್ಕೆ ಬಂದ್ರೆ ಪಾಸ್ ಬುಕ್ ತೋರಿಸಿ 15 ಲಕ್ಷ ರೂಪಾಯಿ ಯಾವಾಗ ಹಾಕ್ತಿರಿ ಎಂದು ಕೇಳಿ ಎಂದರು. ಯೋಗಿ ಆದಿತ್ಯನಾಥ್ ಧರಿಸುವ ಕಾವಿಯನ್ನು ನಾನು ಗೌರವಿಸುತ್ತೇನೆ.ಕಾವಿಯ ಆದರೆ ಬಣ್ಣ ನೋಡಿದರೆ ಸಾಲದು ಅದರೊಳಗೆ ಅಡಗಿರುವ ಕುತಂತ್ರಿಗಳನ್ನು ಗುರುತಿಸಬೇಕು ಎಂದು ರಾಜ್ ಬಬ್ಬರ್ ಹೇಳಿದರು.
ಕಾಪು ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಧರ್ಮದಲ್ಲಿ ರಾಜಕೀಯ ಮಾಡಬೇಡಿ. ರಾಜಕೀಯದಲ್ಲಿ ಧರ್ಮ ಇರಬೇಕು ಅನ್ನೊದು ನನ್ನ ಧ್ಯೇಯ. ಶಾಸಕ ಮಂತ್ರಿ ಎನ್ನುವುದಕ್ಕಿಂತ ಹೆಚ್ಚಾಗಿ ಜನಸೇವಕನಾಗಿ ಕೆಲಸ ಮಾಡಿದೀನಿ.ಈಗ ಸೊರಕೆ ಚುನಾವಣೆ ನಿಂತಿದ್ದಾರೆ ಅನ್ನೊದಕ್ಕಿಂತ ನೀವೇ ಅಭ್ಯರ್ಥಿ ಅನ್ನೊ ರೀತಿಯಲ್ಲಿ ನನ್ನನ್ನು ಬೆಂಬಲಿಸಿ ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡ್ರು.
ಕಾಂಗ್ರೆಸ್ ಮುಖಂಡರಾದ ಯು. ಆರ್ ಸಭಾಪತಿ, ಎಂ.ಎ. ಗಫೂರ್, ಸುಧೀರ್ ಹೆಗ್ಡೆ, ಹರೀಶ್ ಕಿಣಿ, ಮಾಲತಿ ಆಚಾರ್ಯ, ಲಕ್ಷ್ಮೀನಾರಾಯಣ ಪ್ರಭು, ಚಂದ್ರಿಕಾ ಕೇಳ್ಕರ್, ವಿಲ್ಸನ್ ರೊಡ್ರಿಗಸ್,ರಾಬರ್ಟ್, ವಿನೋದ್ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಸುರೇಶ್ ನಾಯಕ್, ಶಾಂತಾರಾಮಸೂಡ, ಶ್ರೀಪಾದ ರೈ, ಗಿರೀಶ್ ಉದ್ಯಾವರ, ಶ್ರೀಧರ ಶೆಟ್ಟಿ, ಪ್ರವೀಣ್ ಹೆಗ್ಡೆ, ಪಂಜು ಪೂಜಾರಿ, ಸುಗಂಧಿ ಶೇಖರ್, ರವೀಂದ್ರ ಪೂಜಾರಿ, ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು