ಗಲಭೆಕೋರರನ್ನು ಮುಸ್ಲಿಮರೆಂದು ತೋರಿಸಲು ಹೋಗಿ ಸಾಕ್ಷಿ ಸಹಿತ ಸಿಕ್ಕಿಬಿದ್ದ ಝೀಟೀವಿ!

ನ್ಯೂಸ್ ಕನ್ನಡ ವರದಿ: ಕೋಮುಗಲಭೆ ಸಂಧರ್ಭದಲ್ಲಿ ಮಾಧ್ಯಮಗಳ ಜವಾಬ್ದಾರಿ, ಪಾತ್ರ ಬಹುವಾಗಿ ಇರುತ್ತದೆ. ಇಂದಿನ ವಾಟ್ಸಪ್ ಫೇಸ್ಬುಕ್ ತಂತ್ರಜ್ಞಾನದ ಕಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ, ಮತ್ತು ಜನರು ಅದನ್ನು ನಿಜವೆಂದು ನಂಬಿ ಅನೇಕ ಅನಾಹುತಗಳಿಗೆ ಕಾರಣವೂ ಆಗುತ್ತದೆ.

ದೇಶದಲ್ಲಿ ಕೆಲವೊಂದು ಕೋಮು ವಿಷ ಬಿತ್ತುವ ಮಾಧ್ಯಮ ಹೇಗೆ ತಮ್ಮ ವಿಕೃತ ಮನಸ್ಥಿತಿಯನ್ನು, ಅಜೆಂಡಾವನ್ನು ಹೇಗೆ ಜನರ ತಲೆಯೊಳಗೆ ತುರುಕಲು ಪ್ರಯತ್ನಿಸುತ್ತೆ ಎಂದು ಒಂದು ಸಣ್ಣ ಉದಾಹರಣೆ ಇಲ್ಲಿದೆ.

ಏಪ್ರಿಲ್ 2ರಂದು ದಲಿತರು ಕರೆಕೊಟ್ಟ ಭಾರತ ಬಂದ್ ಬೆಳಗ್ಗಿನಿಂದ ಮಧ್ಯಾಹ್ನನದವರೆಗೂ ಶಾಂತ ರೀತಿಯಲ್ಲಿ ನಡೆದಿತ್ತು, ಆದರೆ ನಂತರ ನಾಟಕೀಯ ರೀತಿಯಲ್ಲಿ ಹಿಂಸಾಚಾರ ನಡೆದಿತ್ತು. ಆ ಸಮಯದಲ್ಲಿ ಸಕ್ರಿಯರಾದ ದಲಿತ ವಿರೋಧಿಗಳು ಬಹಳಷ್ಟು ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ದಲಿತರನ್ನು ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ, ಹಿಂದೂ ಧರ್ಮ ವಿರೋಧಿಗಳು ಎಂದು ತೋರಿಸುವ ಪ್ರಯತ್ನ ನಡೆದಿತ್ತು. ಗ್ವಾಲಿಯರ್ ನಲ್ಲಿ ಕೆಲವು ದುಷ್ಕರ್ಮಿಗಳು ಬಂದೂಕುಧಾರಿಗಳಾಗಿ ಪಿಸ್ತೂಲ್ ಹಿಡಿದು ಫೈರಿಂಗ್ ಮಾಡುತ್ತಿದ್ದರು, ಅವರನ್ನೆಲ್ಲಾ ದಲಿತರು ಮತ್ತು ಹಿಂಸಾತ್ಮಕ ಗಲಭೆ ನಡೆಸುವವರು ವ್ಯಾಪಕ ವೈರಲ್ ಆಯಿತು, ಆದರೆ ನಂತರ ಅದು ರಾಜಾ ಚೌಹಾಣ್ ನೇತೃತ್ವದ ದಲಿತ ವಿರೋಧಿ ಹಿಂದೂ ಕಟ್ಟರ್ ವಾದಿ ಪುಡಿ ರೌಡಿಯ ಪಡೆಗಳು ದಲಿತರ ಮೇಲೆಯೇ ಫೈರಿಂಗ್ ಮಾಡಲು ಯತ್ನಿಸಿದ್ದು ಎಂದು ನಿಜ ಸಂಗತಿ ಬಯಲಿಗೆ ಬಂದಿತ್ತು.

ಕಳೆದ ವರ್ಷ ಕಾನ್ಪುರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಯಾರೋ ಪೊಲೀಸರಿಗೆ ನಡೆಸಿದ ಹಲ್ಲೆಯ ಫೋಟೋ ವೈರಲ್ ಮಾಡಿ ದಲಿತರು ಕಾನೂನು ಕೈಗೆತ್ತಿಕೊಂಡು ಪೊಲೀಸರಿಗೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿತ್ತು.

ದಕ್ಷಿಣ ಭಾರತದಲ್ಲಿ ಕಳೆದ ವರ್ಷ ಮೇ 27ರಂದು ನಡೆದ ಪ್ರತಿಭಟನೆಯ ವೀಡಿಯೋ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ದಲಿತರು ಭಾರತ ಬಂದ್ ಹೆಸರಿನಲ್ಲಿ ಹಿಂದೂ ಧರ್ಮ ವಿರೋಧಿ ಕೃತ್ಯ ನಡೆಸುವುದರಲ್ಲಿ ನಿರತರಾಗಿದ್ದಾರೆ ಎಂದು ತೋರಿಸಲು ಪ್ರಯತ್ನ ಮಾಡಿದರು.

ಮೇಲೆ ಹೇಳಿದ ಸುಳ್ಳುಸುದ್ದಿಯ ಪ್ರಚಾರ ದಲಿತರನ್ನು ಕಾನೂನು ಕೈಗೆತ್ತಿಕೊಳ್ಳುವವರು ಎಂದು ಬಿಂಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಸುಳ್ಳುಸುದ್ದಿ ಪ್ರಚಾರದ ಅಜೆಂಡಾ ಒಂದೇ ಆದರೂ ಅದನ್ನು ವೈರಲ್ ಮಾಡುವವರು ಹೆಚ್ಚಿನ ಸಂದರ್ಭದಲ್ಲಿ ತಮ್ಮ ಹೆಸರು, ಗುರುತನ್ನು ಮರೆಮಾಚಿ ನಕಲಿ ಖಾತೆಯನ್ನೇ ನೆಚ್ಚಿಕೊಂಡಿರುತ್ತಾರೆ.

ರಾಷ್ಟ್ರ ಮಟ್ಟದಲ್ಲೇ ಹಲವಾರು ಮಾಧ್ಯಮಗಳು ತನ್ನ ಮುಸ್ಲಿಮ್ ವಿರೋಧಿ ಅಜೆಂಡಾವನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸಿ ಕೋಮು ವಿಷವನ್ನು ತಲೆಯಲ್ಲಿ ತುಂಬಿಸಲು ಹಾತೊರೆಯುತ್ತಿರುತ್ತವೆ ಮತ್ತು ಯಾವುದೇ ಸಂಧರ್ಭದಲ್ಲೂ ಹೇಗಾದರೂ ಮಾಡಿ ವಿವಾದವಲ್ಲದ ವಿಷಯದಲ್ಲೂ ವಿವಾದ ಸೃಷ್ಟಿಸಿ ಅದಕ್ಕೆ ಕೋಮುಗಲಭೆಯ ಬಣ್ಣ ಹಚ್ಚಲು ತಯಾರಿರುತ್ತದೆ ಮತ್ತು ಆ ಮೂಲಕ ತನ್ನ ಟಿಆರ್ಪಿ ಹೆಚ್ಚಿಸುವ ವಿಕೃತ ಚಾಳಿಯನ್ನು ಮುಂದುವರೆಸುತ್ತೆ. ದಲಿತರ ಭಾರತ ಬಂದ್ ನಲ್ಲಿ ನಡೆದ ಹಿಂಸಾಚಾರದಲ್ಲಿ ದಲಿತರಿಗೆ ಮುಸ್ಲಿಮರೇ ಹಲ್ಲೆ ನಡೆಸಿದ್ದಾರೆ, ಮುಸ್ಲಿಮರು ದಲಿತ ವಿರೋಧಿಗಳು, ಗಲಭೆಕೋರರು ಎಂದು ತೋರಿಸುವ ಪ್ರಯತ್ನವೂ ನಡೆದಿತ್ತು,

ತನ್ನ ಮುಸ್ಲಿಮ್ ವಿರೋಧಿ ಅಜೆಂಡಾದಿಂದಲೇ ಪ್ರಸಿದ್ಧಿಯಾಗಿರುವ, ಬಹಳಷ್ಟು ಫೇಕ್ ನ್ಯೂಸ್ ಗಳ ಮೂಲಕ ಕುಖ್ಯಾತಿ ಪಡೆದಿರುವ ಝೀ ನ್ಯೂಸ್ ಮೊನ್ನೆ ನಡೆದ ಭಾರತ ಬಂದ್ ಸಂಧರ್ಭದಲ್ಲಿ ಮುಸ್ಲಿಮರು ಗಲಭೆ ನಡೆಸಿ ದಲಿತರಿಗೆ ಹಲ್ಲೆ ನಡೆಸಿದ್ದಾರೆ ಎಂದು ತೋರಿಸುವ ಪ್ರಯತ್ನ ನಡೆಯಿತು. ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ತನ್ನ ಪ್ರೈಮ್ ಟೈಮ್ ಶೋ ಡಿ.ಎನ್.ಎ ಯಲ್ಲಿ ದಲಿತರು ನಡೆಸಿದ ಭಾರತ ಬಂದನ್ನು ದಲಿತರು ನಡೆಸಿದ ಹಿಂಸಾಚಾರ ಎಂದೇ ಹೇಳಿಬಿಟ್ಟ, ಗುಂಡು ಹಾರಿಸಿದವರೂ ದಲಿತರು ಎಂದೇ ಹೇಳಿದ, ಇದು ರಾಜಕೀಯ ಲಾಭಕ್ಕಾಗಿ ನಡೆದ ಹಿಂಸಾಚಾರ ಎಂದೂ ಹೇಳಿದ, ನಂತರ ಈ ದಿನದ ನಡೆದ ಹಿಂಸಾಚಾರದ ವೀಡಿಯೋ ನೋಡಿ ಎಂದು ಹಲವು ಘಟನೆಗಳ ವೀಡಿಯೋ ತೋರಿಸಿದ..

ಆ ಸಂದರ್ಭದಲ್ಲಿ ದಲಿತ ವಿರೋಧಿ ರಾಜಾ ಸಿಂಗ್ ಚೌಹಾಣ್ ಪಿಸ್ತೂಲ್ ಮೂಲಕ ಗುಂಡು ಹಾರಿಸುವುದನ್ನು ಝೂಮ್ ಮಾಡಿ ಹತ್ತಿರದಿಂದ ಪುನಃ ಪುನಃ ತೋರಿಸಿದ.. ನಂತರ ಈ ವೀಡಿಯೋ ನೋಡಿದರೆ 3.18 ನಿಮಿಷದಲ್ಲಿ ಬಂದೂಕು ಹಿಡಿದು ಮೀಸೆಯಿಲ್ಲದ ಆದರೆ ಗಡ್ಡದಾರಿಯಾಗಿರುವ ವ್ಯಕ್ತಿಯನ್ನು ಝೂಮ್ ಮಾಡಿ ತೋರಿಸತೊಡಗಿದರು. ನಂತರ ಅವನ ದಲಿತ ವಿರೋಧಿ ಸುದ್ದಿ ಮುಂದುವರೆಸಿದ.

ಆದರೆ ಝೀ ನ್ಯೂಸ್ ತೋರಿಸಿದ ಮೀಸಿಯಿಲ್ಲದೇ ಗಡ್ಡದಾರಿಯಾಗಿರುವ ವ್ಯಕ್ತಿಗೆ ಆ ರೀತಿಯ ಗಡ್ಡವೇ ಇಲ್ಲ, ಅದನ್ನು NDTV ತನ್ನ ವೀಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಿತು. ತನ್ನ ಅತ್ಯಂತ ಮುಖ್ಯ ಪ್ರೈಮ್ ಟೈಮ್ ಶೋ ನಲ್ಲೇ ವೀಡಿಯೋವನ್ನು ತಿರುಚಿ ಎಡಿಟ್ ಮಾಡಿ ಗಡ್ಡವಿಲ್ಲದ ದುಷ್ಕರ್ಮಿಗೆ ಗಡ್ಡ ಸೇರಿಸಿ ಅವನನ್ನು ಝೂಮ್ ಮಾಡಿ ತೋರಿಸಿ ಮುಸ್ಲಿಮರಂತೆ ತೋರಿಸುವ ಪ್ರಯತ್ನ ನಡೆಸಿದ್ದು ತಾನು ಮುಸ್ಲಿಮ್ ವಿರೋಧಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿತು, ಮತ್ತು ಜನರ ಮನದಲ್ಲಿ ವಿಷ ಭಾವನೆ ತುಂಬಿಸಲು ಯಾವುದೇ ನೀಚ ಮಟ್ಟಕ್ಕೂ ಇಳಿಯಲು ತಯಾರಿದ್ದೇವೆ ಎಂದು ತೋರಿಸಿಕೊಟ್ಟಿತು. NDTV ವೀಡಿಯೋ ದ 0.35 ನಿಮಿಷ ನೋಡಿ.

Leave a Reply

Your email address will not be published. Required fields are marked *