ಬರೋಬ್ಬರಿ ₹1,000,000,000,000 ಕೊಟ್ಟು ಫ್ಲಿಪ್ಕಾರ್ಟಿನ 77% ಷೇರು ಖರೀದಿಸಿದ್ದು ಯಾರು ಗೊತ್ತೇ?
ನ್ಯೂಸ್ ಕನ್ನಡ ವರದಿ: ಭಾರತದ ಅತಿದೊಡ್ಡ ಆನ್ಲೈನ್ ಸಂಸ್ಥೆ ಫ್ಲಿಪ್ಕಾರ್ಟ್ ವಿಶ್ವದ ಅತಿದೊಡ್ಡ ಸಂಸ್ಥೆಯಾದ ವಾಲ್ಮಾರ್ಟ್ ತೆಕ್ಕೆಗೆ ಬಿದ್ದಿದೆ. ಫ್ಲಿಪ್ಕಾರ್ಟ್ನ ಶೇ.77ರಷ್ಟು ಷೇರುಗಳನ್ನು 16 ಬಿಲಿಯನ್ ಡಾಲರ್ಗೆ ಅಂದರೆ ಸುಮಾರು 1 ಲಕ್ಷ ಕೋಟಿ ನೀಡಿ ವಾಲ್ಮಾರ್ಟ್ ಖರೀದಿಸಿದೆ. ಈ ಡೀಲ್ಗೆ ಫ್ಲಿಪ್ಕಾರ್ಟ್ ಮತ್ತು ವಾಲ್ಮಾರ್ಟ್ ಎರಡೂ ದೈತ್ಯ ಸಂಸ್ಥೆಗಳು ಅಧಿಕೃತವಾಗಿ ಸಹಿ ಹಾಕಿವೆ. ಶೇ.77ರಷ್ಟು ಷೇರುಗಳನ್ನು 16 ಬಿಲಿಯನ್ ಡಾಲರ್ ಖರೀದಿಸಲಾಗಿದೆ ಎಂದು ಸಂಸ್ಥೆಗಳ ಪ್ರಕಟಣೆ ಹೊರಡಿಸಿವೆ. ಉಳಿದ ಷೇರುಗಳುನ್ನು ಫ್ಲಿಪ್ಕಾರ್ಟ್ನ ಸಹ–ಸಂಸ್ಥಾಪಕ ಬಿನ್ನಿ ಬನ್ಸಾಲ್ ಸೇರಿದಂತೆ ಇತರರು ಹೊಂದಿರಲಿದ್ದಾರೆ.
ಅಮೆರಿಕಾದ ವಾಲ್ಮಾರ್ಟ್ ಸಂಸ್ಥೆ ಇದುವರೆಗೂ ಮಾಡಿಕೊಂಡಿರುವ ದೊಡ್ಡ ಡೀಲ್ ಇದಾಗಿದೆ. 2007ರಲ್ಲಿ ಬೆಂಗಳೂರಿನಲ್ಲಿ ಫ್ಲಿಪ್ಕಾರ್ಟ್ ಆರಂಭವಾಗಿದ್ದು, ಇದಾದ ಕೆಲವೇ ವರ್ಷಗಳಲ್ಲಿ ದೊಡ್ಡ ಸಂಸ್ಥೆಯಾಗಿ ಫ್ಲಿಪ್ಕಾರ್ಟ್ ಹೊರಹೊಮ್ಮಿತ್ತು. ಅಮೇಜಾನ್ ಸೇರಿದಂತೆ ಇತರ ಸಂಸ್ಥೆಗಳಿಗೆ ಫ್ಲಿಪ್ ಕಾರ್ಟ್ ಭಾರಿ ಫೈಪೋಟಿ ನೀಡಿತ್ತು. ವಿಶೇಷ ಎಂದರೆ ಫ್ಲಿಪ್ಕಾರ್ಟ್ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು