ನಟಿ ನೇಹಾ ದೂಪಿಯಾಳನ್ನು ಮದುವೆಯಾದ ಅಂಗದ್ ಯಾರು? ಯಾರ ಮಗ ಗೊತ್ತೇ?
ನ್ಯೂಸ್ ಕನ್ನಡ ವರದಿ: ಬಾಲಿವುಡ್ ನಟಿ ನೇಹಾ ದೂಪಿಯಾ ಮೇ 10ರಂದು ಮದುವೆಯಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನೇಹಾ ದೂಪಿಯಾ ತನಗಿಂತಲೂ 5 ವರ್ಷ ಕಿರಿಯ ರೂಪದರ್ಶಿ, ನಟ, ಕ್ರಿಕೆಟರ್ ಅಂಗದ್ ಬೇಡಿಯನ್ನು ಮದುವೆಯಾದರು.
ಕೆಲವು ತಿಂಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ತುಂಬಾ ಸರಳವಾಗಿ ತಮ್ಮ ವಿವಾಹ ಸಮಾರಂಭ ನಡೆಸಿದರು. ನೇಹಾ ದೂಪಿಯಾಳನ್ನು ಮದುವೆಯಾದ ಅಂಗದ್ ಅಂಡರ್ 19ನ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು, ನಂತರ ಮೋಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗದ್ ಬೇಡಿ ಖ್ಯಾತ ಮಾಜೀ ಕ್ರಿಕೆಟರ್, ಸ್ಪಿನ್ ಮಾಂತ್ರಿಕ, ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಬಿಷನ್ ಸಿಂಗ್ ಬೇಡಿಯ ಮಗ. ಬಿಷನ್ ಸಿಂಗ್ ಬೇಡಿ ಭಾರತ ತಂಡದ ಪರವಾಗಿ 61 ಟೆಸ್ಟ್ ಪಂದ್ಯಖಳನ್ನು ಆಡಿ 260 ವಿಕೆಟ್ ಪಡೆದಿದ್ದರು, ಮತ್ತು ಪ್ರಥಮ ದರ್ಜೆ ಪಂದ್ಯದಲ್ಲಿ 1500ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು.