ದುಬೈನಿಂದ ಮತದಾನಕ್ಕಾಗಿಯೇ ಊರಿಗೆ ಬಂದ NRI ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ದಂಪತಿ!

ನ್ಯೂಸ್ ಕನ್ನಡ ವರದಿ: ಯುನೈಟೆಡ್ ಅರಬ್ ಎಮರೇಟ್ಸ್ ನಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿ ಬೆಳೆದಿರುವ ಫಾರ್ಚ್ಯೂನ್ ಗ್ರೂಪ್ಸ್ ಮುಖ್ಯಸ್ಥರಾದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ಪ್ರವೀಣ್ ಕುಮಾರ್ ಶೆಟ್ಟಿ ತಮ್ಮ ಎಷ್ಟೇ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಪ್ರತೀ ಬಾರಿಯೂ ಚುನಾವಣೆಯ ಸಂಧರ್ಭದಲ್ಲಿಯೂ ಕೇವಲ ಮತದಾನ ಮಾಡುವ ಉದ್ದೇಶದಿಂದ ಭಾರತಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿ ಸಂತೃಪ್ತರಾಗುತ್ತಾರೆ.

ಪ್ರತೀ ಬಾರಿಯಂತೆ ಈ ಬಾರಿಯೂ ದುಬೈನಿಂದ ಹಾರಿ ಹುಟ್ಟೂರಿಗೆ ಬಂದಿದ್ದಾರೆ ಪ್ರವೀಣ್ ಕುಮಾರ್ ಶೆಟ್ಟಿ, ದೇಶಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ನಿನ್ನೆ ನಡೆದಿತ್ತು, ಮತದಾನ ಮಾಡಲು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ವಕ್ವಾಡಿಗೆ ಆಗಮಿಸಿ ಮತದಾನದಲ್ಲಿ ಪಾಲ್ಘೊಂಡರು. ಪ್ರವೀಣ್ ಶೆಟ್ಟಿಯವರು ಬೆಳಿಗ್ಗೆ ವಕ್ವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅವರೊಂದಿಗೆ ಮತದಾನ ಮಾಡುವ ಸಂದರ್ಭದಲ್ಲಿ ಅವರ ಸ್ನೇಹಿತ ಹಾಗೂ ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ಹಾಗೂ ನಿರ್ಮಾಪಕ ವಿ.ಕೆ. ಮೋಹನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *