ರಾಜ್ಯದ ವಿಧಾನಸಭಾ ಚುನಾವಣೆಗೆ ಪಕ್ಷಗಳು ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೇ? ವರದಿ ಓದಿ..
ನ್ಯೂಸ್ ಕನ್ನಡ ವರದಿ : ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಸಂಸ್ಥೆ ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಹಣದ ಪ್ರಮಾಣ ಕುರಿತು ಸಮೀಕ್ಷೆ ನಡೆಸಿತ್ತು. ಭಾರತದ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಧಾನಸಭಾ ಚುನಾವಣೆ ಕರ್ನಾಟಕ ಚುನಾವಣೆ ಎಂದು ಸಂಸ್ಥೆಯ ಸಮೀಕ್ಷೆ ಹೇಳುತ್ತಿದೆ. ಮೇ 12 ರಂದು ಮತದಾನ ನಡೆದಿದ್ದು, ನಾಳೆ 15 ರಂದು ಮತ ಎಣಿಕೆ ನಡೆಯಲಿದ್ದು, ಈ ಮಧ್ಯೆ ಸಿಎಂಎಸ್ ಸಂಸ್ಥೆ ನಿಡಿದ ಖರ್ಚಿನ ವರದಿ ಜನರನ್ನು ಬೆಚ್ಚಿಬೀಳಿಸಿದೆ. ಸಿಎಂಎಸ್ ಸಂಸ್ಥೆ ಪ್ರಕಾರ ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬರೋಬ್ಬರಿ 9,500 – 10,500 ಕೋಟಿ ರೂಪಾಯಿ ಹಣದ ಹೊಳೆ ಹರಿಸಿವೆ ಎಂದು ಅಂದಾಜಿಸಲಾಗಿದ್ದು, ಇಲ್ಲಿಯತನಕ ನಡೆದಿರುವ ಎಲ್ಲಾ ರಾಜ್ಯಗಳ ಚುನಾವಣೆಗಿಂತ ಕರ್ನಾಟಕದ ಚುನಾವಣೆಯ ಅತ್ಯಂತ ದುಬಾರಿ ಎಂದು ಸಂಸ್ಥೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖ ಮಾಡಿದೆ.
ಕಳೆದ 2013 ರಲ್ಲಿ ನಡೆದ ಚುನಾವಣೆಯಲ್ಲಿ ಚೆಲ್ಲಿದ ಹಣದ ಪ್ರಮಾಣಕ್ಕಿಂತ ದುಪ್ಪಟ್ಟಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯ ಖಚು೯. ಭಾರತದಲ್ಲಿಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಹಣವನ್ನು ಚುನಾವಣೆಗಾಗಿ ವ್ಯಯಿಸಲಾಗುತ್ತದೆ. ಇನ್ನು ಈ ಬಾರಿಯ 2019 ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು 30 ಸಾವಿರ ಕೋಟಿ ಖರ್ಚು ಮಾಡಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಈ ಕರ್ನಾಟಕ ಚುನಾವಣೆಯ ಪರಿಣಾಮದಿಂದ 50,000 – 60,000 ಸಾವಿರ ಕೋಟಿಯಷ್ಟು ಹಣ ವ್ಯಯಿಸಬಹುದು. ಇದು 2014 ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಎಂದು ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ಭಾಸ್ಕರ್ ರಾವ್ ತಿಳಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷಗಳಿಗಿಂತ ಅಭ್ಯರ್ಥಿಗಳಿಂದಲೇ ಶೇ. 75 ರಷ್ಟು ಹಣ ಖರ್ಚು ಮಾಡಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಸಿಎಂಎಸ್ ಸಂಸ್ಥೆ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ. ಕರ್ನಾಟಕ ಚುನಾವಣೆಯನ್ನು ಆಯೋಗ ಉಚಿತ ಮತ್ತು ನ್ಯಾಯಯುತವಾಗಿ ಮಾಡಲು ಯತ್ನಿಸಿತ್ತು. ಆದರೆ, ಒಂದು ಕಡೆ ಸಣ್ಣ ಮೊತ್ತದ ಹಣವನ್ನು ಸಿಗುವ ಹಾಗೇ ಮಾಡಿ, ರಾಜಕೀಯ ಪಕ್ಷಗಳು ಬೇಕಾದಷ್ಟು ಹಣವನ್ನು ಹಂಚಿದ್ದಾರೆ. ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು, ಸಣ್ಣ ಪ್ರಮಾಣದ ಅಕ್ರಮ ಹಣ ಎಂದು ಸಂಸ್ಥೆ ಹೇಳಿದೆ.