ಬಿಡುಗಡೆಯ ಬಳಿಕ ಸಲ್ಮಾನ್ ಖಾನ್ ರನ್ನು ಭೇಟಿಯಾದ ಕತ್ರೀನಾ ಕೈಫ್ ಸಹಿತ ಹಲವು ಬಾಲಿವುಡ್ ತಾರೆಯರು!
ನ್ಯೂಸ್ ಕನ್ನಡ ವರದಿ-(08.04.18): 20 ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಗೆ 5 ವರ್ಷಗಳ ಕಾಲ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಸಲ್ಮಾನ್ ಖಾನ್ ನಿನ್ನೆ ತಾನೇ ಜೈಲಿನಿಂದ ಬಿಡುಗಡೆಗೊಂಡು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದರು. ಸಲ್ಮಾನ್ ಖಾನ್ ಬಿಡುಗಡೆಯಾದ ಸಂಭ್ರಮದಲ್ಲಿ ಅವರ ನಿವಾಸದ ಮುಂದೆ ಅಭಿಮಾನಿಗಳ ದಂಡೇ ನೆರೆದಿತ್ತು. ಇದೇ ವೇಳೆ ಸಲ್ಮಾನ್ ಖಾನ್ ರನ್ನು ಭೇಟಿಯಾಗಲು ಹಲವು ಬಾಲಿವುಡ್ ತಾರೆಯರು ಆಗಮಿಸಿದ್ದರು.
ಕಳೆದ ಏಳು ವರ್ಷಗಳಿಂದ ಸಲ್ಮಾನ್ ಖಾನ್ ರ ಪ್ರೇಯಸಿಯಾಗಿರುವ ಕತ್ರೀನಾ ಕೈಫ್ ಎಲ್ಲರಿಗಿಂತ ಮೊದಲು ಸಲ್ಮಾನ್ ರನ್ನು ಭೇಟಿಯಾಗಿದ್ದು, ಬಳಿಕ ಮಲೈಕಾ ಅರೋರಾ, ಡೈಸಿ ಶಾ, ಹುಮಾ ಕುರೇಶಿ ಸೇರಿದಂತೆ ಹಲವು ಮಂದಿ ಭೇಟಿಯಾದರು. ಬಾಂದ್ರಾದಲ್ಲಿರುವ ತಮ್ಮ ನಿವಾಸದ ಬಾಲ್ಕನಿಯಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಕೈ ಬೀಸಿದರು.