ರಾಜ್ಯದಲ್ಲಿ ರಜನಿಕಾಂತ್ ರ ‘ಕಾಲ’ ಚಿತ್ರ ನಿಷೇಧದ ಕುರಿತು ಪ್ರಕಾಶ್ ರೈ ಹೇಳಿದ್ದೇನು?
ನ್ಯೂಸ್ ಕನ್ನಡ ವರದಿ-(04.06.18): ಇತ್ತೀಚಿಗೆ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ತಲೈವಾ ರಜನಿಕಾಂತ್ ನೀಡಿದ್ದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ಹೊಸ ಚಿತ್ರವಾಗಿರುವ ‘ಕಾಲಾ’ ಸಿನಿಮಾ ಬಿಡುಗಡೆಗೆ ಕನ್ನಡ ಚಿತ್ರ ರಂಗ ರಾಜ್ಯಾದ್ಯಂತ ನಿಷೇಧ ವಿಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಹು ಭಾಷಾ ನಟ ಪ್ರಕಾಶ್ ರೈ, ಚಿತ್ರದ ಮೇಲಿನ ನಿಷೇಧ ಹೇರಿದ ಮಾತ್ರಕ್ಕೆ ಸಮಸ್ಯೆ ಇತ್ಯರ್ಥವಾಗುತ್ತದೆಯೇ?ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ಜಸ್ಟ್ ಆಸ್ಕಿಂಗ್ ಎಂಬ ಅಭಿಯಾನ ನಡೆಸುತ್ತಿರುವ ಪ್ರಕಾಶ್ ರೈ, ಕಳೆದ ಕೆಲವು ದಿನಗಳಿಂದ ರಾಜಕೀಯ, ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದಾರೆ. “ಕಾವೇರಿ ಕುರಿತಾದ ರಜನಿಕಾಂತ್ ಅವರ ಹೇಳಿಕೆ ನನಗೂ ನೋವು ತಂದಿದೆ. ಆದರೆ ಅವರ ಸಿನೆಮಾವನ್ನು ನಿಷೇಧಿಸಿದ್ದು ಸರಿಯಲ್ಲ ಎಂದ ಅವರು, ನಟನೊಬ್ಬನ ಹೇಳಿಕೆಯಿಂದ ಇಡೀ ಚಿತ್ರ ತಂಡದ ಗತಿ ಎನಾಗಬೇಕು? “ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯ ಸರಕಾರ ಕೇಂದ್ರದಲ್ಲಿರುವ ಬಿಜೆಪಿ ಪಕ್ಷ ಪದ್ಮಾವತ್ ಸಿನಿಮಾವನ್ನು ನಿಷೇಧಿಸದಂತೆ ರಾಜ್ಯದಲ್ಲೂ ವಿವಾದಕ್ಕೆ ಆಸ್ಪದ ನೀಡುತ್ತಿದಿಯೋ? ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಜನ ಸಾಮಾನ್ಯನ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.