ಈದ್ ದಿನದಂದೇ ಪಾಪಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಓರ್ವ ಸೈನಿಕ ಹುತಾತ್ಮ!
ಕಳೆದ ಮಂಗಳವಾರ ಪಾಕ್ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಬಿಎಸ್ಎಫ್ ನ ಮೂರು ಅಧಿಕಾರಿಗಳು ಮತ್ತು ಓರ್ವ ಯೋಧ ಹುತಾತ್ಮರಾಗಿದ್ದರು. ಇಂದು ಬೆಳಗ್ಗೆ ಪಾಕ್ ಪಡೆಗಳು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಪಡೆಯ ಯೋಧರತ್ತ ಏಕಾಏಕಿ ಗುಂಡು ಹಾರಿಸಿದ್ದು, ಈದ್ ದಿನದಂದೇ ಪಾಕಿಸ್ತಾನ ಪಡೆಗಳು ಜಮ್ಮು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ಕರ್ತವ್ಯದಲ್ಲಿದ್ದ ಭದ್ರತಾ ಪಡೆಯ ಯೋಧ ಬಿಕಾಸ್ ಗುರುಂಗ್ ಕದನದಲ್ಲಿ ಹುತಾತ್ಮರಾಗಿದ್ದಾರೆ.
ಜೂನ್ 4ರಂದು ಭಾರತ ಮತ್ತು ಪಾಕಿಸ್ತಾನದ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆದು ಕದನ ವಿರಾಮ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಒಪ್ಪಂದ ಮುರಿದ ಪಾಕ್ ಮತ್ತೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿರುವುದರಿಂದ ಮತ್ತು ಕದನ ವಿರಾಮ ಒಪ್ಪಂದವನ್ನು ಮುರಿಯುತ್ತಿರುವುದರಿಂದ ಈ ಬಾರಿ ಈದ್ ಹಬ್ಬದ ದಿನ ವಾಘಾ-ಅಟ್ಟಾರಿ ಗಡಿಯಲ್ಲಿ ಭದ್ರತಾ ಪಡೆ ಮತ್ತು ಪಾಕ್ ರೇಂಜರ್ಗಳ ಮಧ್ಯೆ ಸಿಹಿ ವಿನಿಮಯ ಕೂಡ ನಡೆದಿಲ್ಲ ಎಂದು ತಿಳಿದು ಬಂದಿದೆ.