ಸಿದ್ದರಾಮಯ್ಯರಿಗೆ ಸಿಗುತ್ತಿದೆ ಮತ್ತೊಂದು ಉಚಿತ ಕೊಡುಗೆ ! ಏನು ಗೊತ್ತೇ ?

ನ್ಯೂಸ್‌ ಕನ್ನಡ ವರದಿ : ತಮ್ಮ ನೆಚ್ಚಿನ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕೋಟ್ಯಂತರ ಬೆಲೆಬಾಳುವ ಕಾರ್ ನ್ನು ಗಿಫ್ಟ್ ಕೊಟ್ಟಿರೋ ಸುದ್ದಿ ಎಲ್ಲರಿಗೂ ತಿಳಿದಿದ್ದೀರಿ. ಈ ಬೆನ್ನಲ್ಲೇ ಈಗ ಸಿದ್ದರಾಮಯ್ಯರವರಿಗೆ ಮತ್ತೆ ಎರಡು ಉಚಿತ ಕೊಡುಗೆ ಒಲಿದು ಬಂದಿದ್ದು, ಬಾದಾಮಿ ಅಭಿಮಾನಿಗಳಿಬ್ಬರು ಉಚಿತ ಬಾಡಿಗೆ ಮನೆ ಕೊಡಲು ಮುಂದೆ ಬಂದಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ನೂತನ ಶಾಸಕ ಸಿದ್ದರಾಮಯ್ಯ ಮನೆ, ಕಚೇರಿ ಮಾಡುವುದಾಗಿಯೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಯಾದ ಶಂಕರಗೌಡ ಕೆಳಗಿನಮನಿ ಎಂಬುವರು ಉಚಿತ ಬಾಡಿಗೆ ಮನೆ ಆಫರ್ ಕೊಟ್ಟಿದ್ದಾರೆ. ಬಾದಾಮಿಯ ಎಸ್ ಎಫ್ ಹೊಸಗೌಡರ ಕಾಲೋನಿಯ ಜಯನಗರದಲ್ಲಿರೋ ಮನೆ ಸುಸಜ್ಜಿತವಾದ 50*50 ಅಳತೆ ಡಬಲ್ ಬೆಡ್ ರೂಮ್, ಡೈನಿಂಗ್ ಹಾಲ್, ಆಫೀಸ್ ರೂಮ್, ಪೂಜಾ ರೂಮ್, ಕಾರ್ ಪಾರ್ಕಿಂಗ್, ಸೇರಿದಂತೆ 186*150 ಅಳತೆಯ ವಿಶಾಲವಾದ ಹೊರಾಂಗಣ ಜಾಗವನ್ನು ಹೊಂದಿದೆ. ಈ ಮನೆಯನ್ನು ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಜೂನ್ 11 ರಂದು ಬಾದಾಮಿಗೆ ಬಂದಿದ್ದ ವೇಳೆ ನೋಡಿಕೊಂಡು ಹೋಗಿದ್ದಾರೆ. ಮೂಲತಃ ಗುತ್ತಿಗೆದಾರರಾಗಿರುವ ಶಂಕರಗೌಡ ಕೆಳಗಿನಮನಿ, ಐತಿಹಾಸಿಕ ಬಾದಾಮಿ ಕ್ಷೇತ್ರ ಅಭಿವೃದ್ದಿ ಜೊತೆಗೆ ಮಾಜಿ ಸಿಎಂ ಎನ್ನುವ ಕಾರಣಕ್ಕೆ ಉಚಿತ ಬಾಡಿಗೆ ಮನೆ ಕೊಡುವ ಮಹದಾಸೆ ಹೊಂದಿದ್ದೇನೆ ಎನ್ನುತ್ತಿದ್ದಾರೆ. ಇದರ ಜೊತೆಗೆ ಬಾದಾಮಿ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಹೊಸಗೌಡರ ಮನೆಯನ್ನೂ ಕೂಡ ಡಾ. ಯತೀಂದ್ರ ನೋಡಿದ್ದಾರೆ. ಇವರು ಕೂಡಾ ಸಿದ್ದರಾಮಯ್ಯರಿಗೆ ಉಚಿತ ಬಾಡಿಗೆ ಮನೆಕೊಡಲು ಸಿದ್ದವೆನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಮನೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉಚಿತ ಬಾಡಿಗೆ ಮನೆಯ ಎರಡೆರಡು ಕೊಡುಗೆಗಳು ಬಂದಿವೆ. ಆದರೆ ಸಿದ್ದರಾಮಯ್ಯ ಉಚಿತ ಬಾಡಿಗೆ ಮನೆ ಆಫರ್ ಸ್ವೀಕರಿಸುತ್ತಾರಾ ಎನ್ನುವುದು ಪ್ರಶ್ನಾತೀತವಾಗಿದೆ.

Leave a Reply

Your email address will not be published. Required fields are marked *