ಮೋದಿ ಇಫೆಕ್ಟ್: ಭಾರತಕ್ಕೆ ತೈಲ ಪೂರೈಕೆ ಮಾಡುತ್ತೇವೆಂದು ಮಂಡಿಯೂರಿದ ಇರಾನ್!

ಇರಾನ್ ದೇಶದಿಂದ ಭಾರತವು ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ನಿನ್ನೆ ತಾನೇ ಓ ಕುರಿತು ಹೇಳಿಕೆ ನೀಡಿದ್ದ ಇರಾನ್ ನ ಉಪ ರಾಯಭಾರಿ ಹಾಗೂ ಚಾರ್ಜ್ ದಿ ಅಫೇರ್ ಮಸೂದ್ ರೆಝ್ವಾನಿಯನ್ ರೆಹಾಗಿ, ಅಮೆರಿಕದ ನಿಷೇಧಗಳನ್ನು ಅನುಸರಣೆ ಮಾಡಿದ ಬಳಿಕ ಭಾರತವು ಇರಾನ್ ತೈಲ ಆಮದನ್ನು ಕಡಿತಗೊಳಿಸಿದ್ದೇ ಆದಲ್ಲಿ ಭಾರತವು ಇರಾನ್ ನಿಂದ ಪಡೆದುಕೊಳ್ಳುತ್ತಿರುವ ವಿಶೇಷ ಸೌಕರ್ಯಗಳನ್ನು ಕಳೆದುಕೊಳ್ಳಬೇಕಾದೀತು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಇರಾನ್ ಬಾಲಮುದುರಿಕೊಂಡು ಭಾರತದ ಮುಂದೆ ಬಂದು ನಿಂತಿದೆ.

ಇಂದು ಇರಾನ್‌ ದೂತಾವಾಸ ಈ ಬಗ್ಗೆ ಸ್ಪಷ್ಟೀಕರಣ ನೀಡಿ ಭಾರತಕ್ಕೆ ಪೂರೈಸಲಾಗುವ ತೈಲ ಪ್ರಮಾಣವನ್ನು ಕಾಯ್ದುಕೊಳ್ಳಲು ಎಲ್ಲ ಸಾಧ್ಯ ಯತ್ನಗಳನ್ನು ಮಾಡಲಾಗುವುದು ಎಂದು ಹೇಳುವ ಮೂಲಕ ತನ್ನ ಕಠಿನ ನಿಲುವಿನಿಂದ ಮೃದುವಾಗಿ ತೇಪೆ ಹಾಕುವ ಕೆಲಸ ಮಾಡಿದೆ. ಅಸ್ಥಿರ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯೊಂದಿಗೆ ವ್ಯವಹರಿಸುವಾಗ ಹೊಸದಿಲ್ಲಿ ಎದುರಿಸುವ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಹಾಗೆಯೇ ಭಾರತ ತನ್ನ ಇಂಧನ ಪಾಲುದಾರನನ್ನು ಆಯ್ಕೆ ಮಾಡಿಕೊಳ್ಳಬೇಕಾಗುವುದು ಮತ್ತು ಹಾಗೆ ಮಾಡುವಾಗ ಅದು ಭೂರಾಜಕಾರಣ ಸ್ಥಿತಿಗತಿ ಮತ್ತು ನಂಬಿಗಸ್ಥ ತೈಲ ಪೂರೈಕೆದಾರ ಇತ್ಯಾದಿ ಅಂಶಗಳನ್ನು ಪರಿಗಣಿಸುವುದು ಉತ್ತಮ ಎಂದು ಇರಾನ್‌ ಹೇಳಿದೆ.

Leave a Reply

Your email address will not be published. Required fields are marked *