ದ್ವಿತೀಯ ವರ್ಷದ ಸಂಭ್ರಮದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

ಪ್ರಸಕ್ತ ಕಾಲದಲ್ಲಿ ಯುವ ಸಮೂಹವು ಸಾಮಾಜಿಕ ತಾಣವನ್ನು ಅನಾವಶ್ಯಕವಾಗಿ ಬಳಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಸನ್ನಿವೇಶದಲ್ಲಿ ‘ಸರ್ವ ಧರ್ಮ ಸಮಾಜ ಸೇವೆ ಅಗತ್ಯ’ ಎಂಬ ಒಂದು ಉದ್ದೇಶವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಒಂದಾದ ಅನಿವಾಸಿ ಭಾರತೀಯ ಗೆಳೆಯರ ತಂಡವೊಂದು 2016 ಆಗಸ್ಟ್ 8 ರಂದು ವಾಟ್ಸ್ ಆಪ್ ಮೂಲಕ ‘ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ’ ಎಂಬ ಸಣ್ಣ ಗ್ರೂಪನ್ನು ರಚಿಸಿ ಜಾತಿ ಮತ ಧರ್ಮ ಭೇದ ಮರೆತು ರೋಗಿಗಳಿಗೆ ಅಗತ್ಯವಾದ ರಕ್ತವನ್ನು ಪೊರೈಕೆ ಮಾಡುವ ಮಹತ್ಕಾರ್ಯದಲ್ಲಿ ತೊಡಗಿರುತ್ತದೆ.

2017 ರಲ್ಲಿ ಕರ್ನಾಟಕ ಸರಕಾರದಿಂದ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರುವ ಸಂಸ್ಥೆಯು ಊರ ಮತ್ತು ಪರವೂರಿನಲ್ಲಿರುವ 25 ಅಧಿಕೃತ ನಿರ್ವಾಹಕರ ಮೂಲಕ ಕಾರ್ಯಾಚರಿಸುತ್ತಿದ್ದು 20 ವಾಟ್ಸಪ್ ಗ್ರೂಪುಗಳ ಮೂಲಕ ಸುಮಾರು 4000 ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ.ಅಲ್ಲದೇ ಫೇಸ್ಬುಕ್ ಮೂಲಕ 5000 ಸದಸ್ಯ ಜಾಲವನ್ನು ಕೂಡಾ ಹೊಂದಿದೆ.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯು ಮಂಗಳೂರಿಗೆ ಮಾತ್ರ ಸೀಮಿತವಾಗಿರದೇ,ಸುತ್ತ ಮುತ್ತಲಿನ ಪ್ರದೇಶಗಳಾದ ಸುಳ್ಯ,ಪುತ್ತೂರು,ಉಡುಪಿ,ರಾಯಚೂರು,ಕಲ್ಬುರ್ಗಿ,ಮೈಸೂರು,ಬೆಂಗಳೂರು ಮುಂತಾದ ಕರ್ನಾಟಕದ ಬಹುತೇಕ ಮಹಾ ನಗರಗಳಲ್ಲಿ ರೋಗಿಗಳಿಗೆ ರಕ್ತವನ್ನು ಪೊರೈಕೆ ಮಾಡುತ್ತಿದೆ.ಅಲ್ಲದೇ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಂತಹ ಅರಬ್ ರಾಷ್ಟ್ರಗಳಲ್ಲಿಯೂ ಕಾರ್ಯಾಚರಿಸುತ್ತಿದೆ.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯು ಈ ವರೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು 37 ರಕ್ತದಾನ ಶಿಬಿರಗಳನ್ನು ಆಯೋಜಿಸಿ 2886 ಯೂನಿಟ್ ರಕ್ತವನ್ನು ಸಂಗ್ರಹಿಸಿ ರಕ್ತನಿಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.ಅಲ್ಲದೇ ಪ್ರತಿನಿತ್ಯ ಆವಶ್ಯವಿರುವ ತಾಜಾ ರಕ್ತಗಳ ತುರ್ತು ಮನವಿಯನ್ನು ಕೂಡಾ ಸ್ವೀಕರಿಸಿ ದಾನಿಗಳನ್ನು ಹುಡುಕಿ ಆ ಮೂಲಕ ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ರಕ್ತ ಪೊರೈಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.

ಯಶಸ್ವಿಯಾಗಿ ಎರಡು ವರ್ಷವನ್ನು ಪೊರೈಸಿ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂಸ್ಥೆಯು ಈ ಬಾರಿ ವಿಭಿನ್ನ ರೀತಿಯಲ್ಲಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು ,ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥಾಪನಾ ತಿಂಗಳಾದ ಆಗಸ್ಟ್ ತಿಂಗಳಿನಲ್ಲಿ ಕರಾವಳಿ ಪ್ರದೇಶದ ವಿವಿಧ ನಗರಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ.

ಈ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಅಡ್ಡೂರಿನಲ್ಲಿ ತನ್ನ ಪ್ರಥಮ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ್ದು,ಇನ್ನುಳಿದ ಕಡೆ ಶಿಬಿರಗಳು ನಡೆಯಲಿದೆ.

ಕಳೆದ ಎರಡು ವರ್ಷಗಳಿಂದ ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಿದ ಸಂಘಸಂಸ್ಥೆಗಳು:

ಅಲ್ ನೂರ್ ವೆಲ್ಫೇರ್ ಟ್ರಸ್ಟ್ ಬೈಂದೂರು,ಸುಫಾ ಎಜುಕೇಷನ್ ವೆಲ್ಫೇರ್ ಟ್ರಸ್ಟ್ ಶಿರೂರು,ಯುನೈಟೆಡ್ ಬ್ರದರ್ಸ್ ಚಂದಹಿತ್ಲು,ಹೆಲ್ಪ್ ಇಂಡಿಯಾ ಫೌಂಡೇಷನ್ ತೊಕ್ಕೊಟ್ಟು,ಎಸ್ ಡಿ ಪಿ ಐ ಮಂಚಿ ವಲಯ,ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಝೇಷನ್ ಭಟ್ಕಳ,ಸೋಕರ್ಸ್ ಉಳ್ಳಾಲ,ಮೇಲಂಗಡಿ ಕಲ್ಚರಲ್ ಅಸೋಸಿಯೇಷನ್ ಉಳ್ಳಾಲ,ಕೂಳೂರು ಮುಹಿಯುದ್ದೀನ್ ದಫ್ ಕಮಿಟಿ,ಅಲ್ ಹುನೈನ್ ಅಸೋಸಿಯೇಷನ್ ಕೃಷ್ಣಾಪುರ,ಅಡ್ಡೂರು ಸೆಂಟ್ರಲ್ ಕಮಿಟಿ,ಎನ್ ಡಬ್ಲ್ಯೂ ಸಿ ಶಾಂತಿಭಾಗ್,ಕೈಕಂಬ ಫ್ರೆಂಡ್ಸ್ ಸರ್ಕಲ್,ಫ್ರೆಂಡ್ಸ್ ಮಂಜನಾಡಿ,ಅರೇಬಿಯನ್ ಫ್ರೆಂಡ್ಸ್ ಮಂಜನಾಡಿ,ಗಲ್ಫ್ ಕಮಿಟಿ ಟಿಪ್ಪುನಗರ ಲೊರೆಟ್ಟೊ ಪದವು,ಅಲ್ ಫತಹ್ ಕುಪ್ಪೆಪದವು,ಬದ್ರಿಯಾ ಜುಮಾ ಮಸೀದಿ ಮೂಡುಶೆಡ್ಡೆ,ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಮೂಡುಶೆಡ್ಡೆ,ಎಸ್ ಡಿ ಪಿ ಐ ಉಳ್ಳಾಲ ವಲಯ,ಪಣಂಬೂರು ಮುಸ್ಲಿಂ ಜಮಾಅತ್ (ರಿ) ಕಾಟಿಪಳ್ಳ,ಸಫರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್, ಫಿದಾ ಗೈಸ್ ಮಂಚಿಲ ಉಳ್ಳಾಲ,ಮೌನತುಲ್ ಮಸಾಕೀನ್ ತಾಳಿಪಡ್ಪು,ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಂಚಿ ಕಯ್ಯೂರು,ಸ್ಪೋರ್ಟಿಂಗ್ ಕ್ಲಬ್ ಕೃಷ್ಣಾಪುರ,ಶಾಹೀನ್ ಸ್ಪೋರ್ಟ್ ಸೆಂಟರ್ ಭಟ್ಕಳ,ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್,ಎಂ ಸಿ ಸಿ ಹಾಗೂ ಆಝಾದ್ ಫ್ರೆಂಡ್ಸ್ ಸರ್ಕಲ್ ಉಳ್ಳಾಲ,ದ.ಕ.ಜಿ.ಪಂ.ಸರಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು,ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘ,ಲಯನ್ಸ್ ಕ್ಲಬ್ ಕಾವೂರು ಹಾಗೂ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು,ಯೂತ್ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರ,ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು ಪುತ್ತೂರು,ಮೇಕ್ ಎ ಚೇಂಜ್ (ರಿ)ಮಂಗಳೂರು,ಜಂಇಯ್ಯತುಲ್ ಫ಼ಲಾಹ್ ಬೈ೦ದೂರ್ ತಾಲೂಕು,ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ (ರಿ),ಮಲ್ಲೂರು ಗ್ರಾಮದ ಸರ್ವ ಸಂಘಟನೆಗಳ ಒಕ್ಕೂಟ,ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನೋಳಿ ಮಂಗಳೂರು,ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ (ರಿ) ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ,ಶೋಷಿತರ ರಕ್ಷಣಾ ವೇದಿಕೆ ಮೂಡಿಗೆರೆ,ಎನ್.ಎಫ್.ಸಿ. ಕುಪ್ಪೆಪದವು,ಸುಳ್ಯ ವಲಯ ಹಾಗೂ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘ ಹಾಗೂ ಲಯನ್ಸ್ ಕ್ಲಬ್(ರಿ) ಗುರುಪುರ ಕೈಕಂಬ.

ಕಳೆದ ಎರಡು ವರ್ಷಗಳಿಂದ ನಮ್ಮೊಂದಿಗೆ ರಕ್ತ ಸಂಗ್ರಹಿಸಲು ಸಹಯೋಗ ನೀಡಿದ ರಕ್ತನಿಧಿ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು:

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು,ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ,ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ,
ಕೆ ಎಸ್ ಹೆಗ್ಡೆ ಮಂಗಳೂರು,ಎ ಜೆ ಆಸ್ಪತ್ರೆ ಮಂಗಳೂರು,ಕೆ ಎಂ ಸಿ ಮಂಗಳೂರು,ವೆನ್ಲಾಕ್ ಆಸ್ಪತ್ರೆ ಮಂಗಳೂರು,ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು,ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಕೆ ವಿ ಜಿ ಮೆಡಿಕಲ್ ಕಾಲೇಜ್ ಸುಳ್ಯ.

ಕಳೆದ ಎರಡು ವರ್ಷಗಳಿಂದ ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಿದ ಎಲ್ಲಾ ಸಂಘಸಂಸ್ಥೆಗಳು ಹಾಗೂ ರಕ್ತ ಸಂಗ್ರಹಿಸಲು ಸಹಯೋಗ ನೀಡಿದ ಎಲ್ಲಾ ರಕ್ತ ನಿಧಿ ಸಂಸ್ಥೆಗಳಿಗೂ,ಆಸ್ಪತ್ರೆಗಳಿಗೂ ಹಾಗೂ ಶಿಬಿರಗಳಲ್ಲಿ ರಕ್ತ ದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೂ ತುಂಬು ಹೃದಯದ ಕೃತಜ್ಞತೆಗಳು.

ಪ್ರತಿನಿತ್ಯ ಆವಶ್ಯವಿರುವ ತಾಜಾ ರಕ್ತಗಳ ತುರ್ತು ಮನವಿಗೆ ಸ್ಪಂದಿಸಿ ರಕ್ತದಾನ ಮಾಡುವ ಸ್ವಯಂ ಪ್ರೇರಿತ ರಕ್ತದಾನಿಗಳಿಗೂ ಹಾಗೂ ದಾನಿಗಳನ್ನು ಪಡೆಯಲು ಸಹಕರಿಸುತ್ತಿರುವ ಎಲ್ಲಾ ನಗರಗಳ ಸಮಾಜ ಸೇವಾ ಕಾರ್ಯಕರ್ತರಿಗೂ ಹಾಗೂ ಎಲ್ಲಾ ಮಾಧ್ಯಮ ಮಿತ್ರರಿಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಪರವಾಗಿ ತುಂಬು ಹೃದಯದ ಕೃತಜ್ಞತೆ ಗಳನ್ನು ಸಲ್ಲಿಸುತ್ತಾ ಇನ್ನು ಮುಂದೆಯೂ ತಮ್ಮ ಸಹಕಾರವನ್ನು ಇದೇ ರೀತಿ ನೀಡುವಿರೆಂಬ ಭರವಸೆಯೊಂದಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು.

???? ಸಿರಾಜುದ್ದೀನ್ ಪರ್ಲಡ್ಕ

Leave a Reply

Your email address will not be published. Required fields are marked *