ಅಮೆರಿಕ: ಡೊನಾಲ್ಡ್ ಟ್ರಂಪ್ ಟವರ್ ನಲ್ಲಿ ಅಗ್ನಿ ಅನಾಹುತ: ಓರ್ವ ಮೃತ್ಯು, ನಾಲ್ವರಿಗೆ ಗಾಯ!

ನ್ಯೂಸ್ ಕನ್ನಡ ವರದಿ-(08.04.18): ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸೇರಿದ ಟ್ರಂಪ್ ಟವರ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ. ನ್ಯೂಯಾರ್ಕ್ ನಲ್ಲಿರುವ ಬಹು ಅಂತಸ್ತಿನ ಟ್ರಂಪ್ ಟವರ್ ನ 50 ನೇ ಮಹಡಿಯಲ್ಲಿ ಅಗ್ನಿ ಅನಾಹುತ ನಡೆದಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದು, ಅದರಲ್ಲಿ ಓರ್ವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲು 50ನೇ ಮಹಡಿಯಲ್ಲಿ ಬೆಂಕಿಯು ಕಾಣಿಸಿಕೊಂಡಿತ್ತು. ಬಳಿಕ ಇತರೆ ಮಹಡಿಗಳಿಗೆ ಹಬ್ಬಲು ಪ್ರಾರಂಭಿಸಿದಾಗ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡಿತು. ಈ ಕಾರ್ಯಾಚರಣೆಯು ಕಷ್ಟಕರವಾಗಿದ್ದು, ಗಾಳಿಯು ಜೋರಾಗಿ ಬೀಸುತ್ತಿದ್ದ ಕಾರಣ ಬೆಂಕಿಯು ಇತರ ಮಹಡಿಗಳಿಗೂ ಹಬ್ಬುತ್ತಿತ್ತು ಇದರಿಂದಾಗಿ ಕಾರ್ಯಾಚರಣೆಯು ತ್ರಾಸದಾಯಕವಾಗಿತ್ತು ಎಂದು ಅಗ್ನಿಶಾಮಕದಳದವರು ತಿಳಿಸಿದ್ದಾರೆ. ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಅಗ್ನಿಶಾಮಕದಳದ ಕಾರ್ಯಾಚರಣೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RESTRICTED
NEW YORK, USA – APRIL 7 : Smoke rises from the 50th floor of Trump Tower in New York, United States on April 7, 2018. (Photo by Muhammed Said Tanl/Anadolu Agency/Getty Images)

Leave a Reply

Your email address will not be published. Required fields are marked *