ಇಂಡಿಯಾ ಖರೀದಿಗೆ ಮುಂದಾದ ಕತಾರ್ ಏರ್ವೇಸ್ !
ನ್ಯೂಸ್ ಕನ್ನಡ ವರದಿ : ಏರ್ ಇಂಡಿಯಾ ಜತೆಗೆ ಅದರ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ (ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನಸೇವೆ ನೀಡುವ ಸಂಸ್ಥೆ) ಮತ್ತು ಏರ್ ಇಂಡಿಯಾ ಸಿಂಗಾಪುರ ಏರ್ಪೋರ್ಟ್ ಟರ್ಮಿನಲ್ ಸೇವೆಗಳನ್ನು ಮಾರಾಟ ಮಾಡಲು ಕೇಂದ್ರ ನಿರ್ಧರಿಸಿತ್ತು. ಈ ವರ್ಷದ ಡಿಸೆಂಬರ್ ಒಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಬಿಡ್ಡರ್ಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಡ್ನ ಗಡುವನ್ನು ಮೇ 14 ರಿಂದ ಮೇ 31ಕ್ಕೆ ವಿಸ್ತರಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಏರ್ ಇಂಡಿಯಾ ಖರೀದಿಗೆ ಕತಾರ್ ಏರ್ವೇಸ್ ಆಸಕ್ತಿ ತೋರಿಸಿದೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಏರ್ವೇಸ್ ನಷ್ಟದಲ್ಲಿರುವುದರಿಂದ ಅದರ ಶೇ. 76 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದೀಗ ಏರ್ ಇಂಡಿಯಾ ಖರೀದಿಗೆ ಕತಾರ್ ಏರ್ವೇಸ್ ಆಸಕ್ತಿ ತೋರಿಸಿದೆ. ಏರ್ ಇಂಡಿಯಾ ಏರ್ಲೈನ್ ಅನ್ನು ಮಾತ್ರ ನಾವು ಖರೀದಿಲಿದ್ದೇವೆ. ಅದರ ಇತರೆ ಸೇವೆ ಅಥವಾ ಬ್ಯಾಗೇಜ್ ಖರೀದಿಸುವ ಯೋಚನೆ ನಮಗಿಲ್ಲ. ಇದಕ್ಕೆ ಸರ್ಕಾರ ಒಪ್ಪುವುದಾದರೆ ಮಾತ್ರ ನಾವು ಮುಂದುವರಿಯಲಿದ್ದೇವೆ ಎಂದು ಕತಾರ್ ಏರ್ವೇಸ್ ಸಮೂಹದ ಸಿಇಒ ಅಕ್ಬರ್ ಅಲ್ ಬಕರ್ ತಿಳಿಸಿದ್ದಾರೆ.