ಭಾರತದ ಅಭಿಮಾನಿಗೆ ದುಬೈ ಟಿಕೆಟ್ ಒದಗಿಸಿದ ಪಾಕಿಸ್ತಾನದ ಅಭಿಮಾನಿ ‘ಚಾಚಾ’

ನ್ಯೂಸ್ ಕನ್ನಡ ವರದಿ(19.9.18): ಇಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ದುಬೈಯಲ್ಲಿ ಕ್ರಿಕೆಟ್ ಪಂದ್ಯಾಟವು ನಡೆಯಲಿದ್ದು, ಈಗಾಗಲೇ ಪಂದ್ಯಾಟವು ಪ್ರಾರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದೆಡೆ ಶತ್ರುತ್ವದ ದ್ವೇಷವಿದ್ದರೆ, ಇನ್ನೊಂದೆಡೆ ಪ್ರೀತಿಯೂ ಇದೆ ಅನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿ ಸದಾ ಕ್ರಿಕೆಟ್ ಮೈದಾನದಲ್ಲಿದ್ದು, ಅಭಿಮಾನಿಗಳನ್ನು ಪ್ರೋತ್ಸಾಹಿಸುವ ಸುಧೀರ್ ಗೆ ದುಬೈಗೆ ತೆರಳಲು ಟಿಕೇಟ್ ಇಲ್ಲದ ಕಾರಣ ಪಾಕಿಸ್ತಾನ ತಂಡವನ್ನು ಹುರಿದುಂಬಿಸುವ ಖ್ಯಾತ ಅಭಿಮಾನಿ ಚಾಚಾ, ಸುದೀರ್ ಗೆ ಟಿಕೆಟ್ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಬಶೀರ್ ಯಾನೇ ಚಾಚಾ ಚಿಕಾಗೋ, ದುಬೈಗೆ ಬರಲು ನನ್ನಲ್ಲಿ ಆರ್ಥಿಕ ಸಮಸ್ಯೆ ಇದೆ ಎಂದು ಸುಧೀರ್ ಹೇಳಿಕೊಂಡಿದ್ದ. ನಾನೇನು ಶ್ರೀಮಂತ ವ್ಯಕ್ತಿಯಲ್ಲ ಆದರೂ ನನ್ನ ಹೃದಯ ಒಂದಿಷ್ಟು ವಿಶಾಲವಾಗಿದೆ. ಹಣ ಅಲ್ಲಾಹನ ಕೃಪೆಯಿಂದ ಯಾವಾಗ ಬೇಕಾದರೂ ಬರಬಹುದು. ಸುಧೀರ್ ರ ವಿಮಾನ ಯಾನ ಟಿಕೆಟ್ ಮಾತ್ರವಲ್ಲದೇ ದುಬೈಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದೇನೆ. ನನ್ನ ಸಹಾಯದಿಂದ ದೇವರಿಗೆ ತೃಪ್ತಿಯಾಗಬಹುದು ಎಂದು ನಾನು ನಂಬಿದ್ದೆನೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *