ಮತ್ತೆ ರಾಮಮಂದಿರ ಜಪ ಆರಂಭಿಸಿದ ಬಿಜೆಪಿ

ನ್ಯೂಸ್ ಕನ್ನಡ ವರದಿ7-11= ಅಯೋಧ್ಯೆ
ಪ್ರಬಲ ಹಿಂದುತ್ವದ ಪ್ರತಿಪಾದಕರೆಂದು ನಟಿಸುತ್ತಾ ಅಧಿಕಾರಕ್ಕಾಗಿ ಜನರ ನಂಬಿಕೆಯನ್ನು ಹೈಜಾಕ್ ಮಾಡಿ,ರಾಮಮಂದಿರ ಕಟ್ಟಿಯೇ ತೀರುತ್ತೇವೆಂದು ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಮಾತು ಕೊಟ್ಟಿತ್ತು.
ಅಧಿಕಾರವಧಿ ಮುಗಿಯುತ್ತಾ ಬರುತ್ತಿದ್ದಂತೆ ಮತ್ತೆ ಅದೇ ಮಂದಿರದ ವಿಷಯದೊಂದಿಗೆ ಅಖಾಡಕ್ಕಿಳಿದು ಅಧಿಕಾರ ಗಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲು ಮುಂದಾಗಿದೆ.ಈ ನಾಟಕದ ಅಂಗವಾಗಿ ಸಮುದಾಯಗಳ ನಡುವೆ ಸಂಧಾನ ಆಯ್ಕೆ ಮೂಲಕ ಸಮಸ್ಯೆಗೆ ಪರಿಹಾರ ಎಂಬ ಮಾತನ್ನು ಫೈಜಾಬಾದ್ ಬಿಜೆಪಿ ಜಿಲ್ಲಾಧ್ಯಕ್ಷರ ಮೂಲಕ ತೇಲಿಸಿಬಿಟ್ಟಿದೆ.

ಅಯೋಧ್ಯಾ ವಿವಾದವನ್ನು ಸಮುದಾಯಗಳ ನಡುವೆ ಸಂಧಾನ ಮೂಲಕ ಬಗೆಹರಿಸುವ ಅಯ್ಕೆ ಕೊನೆಗೊಂಡಿದೆ ಮತ್ತು ಬಿಜೆಪಿ ಸಾಂವಿಧಾನಿಕ ಅಥವ ಶಾಸನಾತ್ಮಕ ವಿಧಾನದ ಮೂಲಕ ಅಲ್ಲಿ ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಪಕ್ಷದ ಫೈಜಾಬಾದ್ ಜಿಲ್ಲಾ ಅಧ್ಯಕ್ಷ ಅವಧೇಶ್ ಪಾಂಡೆ ಹೆಳಿದ್ದಾರೆ.
ಆಯೋಧ್ಯೆಯಲ್ಲಿ ಹೆಚ್ಚಿನ ಜನರು ರಾಮಮಂದಿರ ನಿರ್ಮಾಣವಾಗುವುದನ್ನು.ಬಯಸುತ್ತಿದ್ದಾರೆ. ಏಕೆಂದರೆ ಇದೊಂದು ನಂಬಿಕೆಯ ಪ್ರಶ್ನೆಯಾಗಿದೆ ‌ಬಿಜೆಪಿಯೊಂದೇ ಜನರಿಗಾಗಿ ಈ ವಿಚಾರವನ್ನು ಪ್ರಸ್ತಾವಿಸುತ್ತಿದೆ ಎಂದವರು ಮಂಗಳವಾರ ಸುದ್ಧಿಗಾರೊಂದಿಗೆ ಹೇಳಿದರು.ಸಮುದಾಯಗಳ ನಡುವೆ ಸಂಧಾನಕ್ಕೆ ಆಯ್ಕೆಯೊಂದು ಇತ್ತು ಮತ್ತು ಕೋರ್ಟು ಕೂಡ ಅದಕ್ಕೆ ಅವಕಾಶ ನೀಡಿತ್ತು. ಆದರೆ ಅದು ಫಲಪ್ರದವಾಗಲಿಲ್ಲ ಎಂದವರು ನುಡಿದರು.

Leave a Reply

Your email address will not be published. Required fields are marked *