ಮೋದಿಗೇತಕೆ ಕಾಂಗ್ರೆಸ್ ಪರಂಪರೆಯ ಉಸಾಬರಿ?ಚಿದಂಬರಂ ಆಕ್ರೋಶ
ನ್ಯೂಸ್ ಕನ್ನಡ ವರದಿ (17-11-2018)ನವದೆಹಲಿ: ಛತ್ತೀಸ್ ಗಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಾ, ನೆಹರು ಗಾಂಧಿ ಕುಟುಂಬವನ್ನು ಹೊರತುಪಡಿಸಿ ಕಾಂಗ್ರೆಸ್ ಅಧ್ಯಕ್ಷರ ಹೆಸರುಗಳನ್ನು ಪಟ್ಟಿ ಮಾಡುವ ಮೂಲಕ ಪಕ್ಷದ ಪರಂಪರೆಯನ್ನು ನೆನಪಿಸಿ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.
ಮೋದಿಯವರು ರಫೆಲ್ ಯುದ್ಧ ವಿಮಾನ ಒಪ್ಪಂದ, ನಿರುದ್ಯೋಗ ಸಮಸ್ಯೆ ಮತ್ತು ರೈತರ ಆತ್ಮಹತ್ಯೆ ವಿಚಾರಗಳ ಬಗ್ಗೆ ಇನ್ನಾದರೂ ಮಾತನಾಡಲಿ, ನಿನ್ನೆ ಛತ್ತೀಸ್ ಗಢದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿಯವರು ನೆಹರು-ಗಾಂಧಿ ಕುಟುಂಬ ಹೊರತುಪಡಿಸಿ ಬೇರೊಬ್ಬ ನಾಯಕರು ಐದು ವರ್ಷಗಳವರೆಗೆ ಯಾರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ಕಾಂಗ್ರೆಸ್ ನಾಯಕರು ಹೇಳಲಿ ಎಂಂಬಂತೆ ಸವಾಲು ಹಾಕಿದ್ದರು
ಈ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ಮುಖಂಡ ಸ್ವಾತಂತ್ರೋತ್ತರ ಕಾಂಗ್ರೆಸ್ ನಾಯಕರ ಹೆಸರನ್ನು ಹೇಳಿಕೊಳ್ಳಲೂ ಹೆಮ್ಮೆಯಾಗುತ್ತದೆ ಬಾಬಾ ಸಾಹೇಬ್ ಅಂಬೇಡ್ಕರ್ ರಿಂದ ಹಿಡಿದು ಲಾಲ್ ಬಹುದ್ದೂರ್ ಶಾಸ್ತ್ರಿ ,ಕೆ ಕಾಮರಾಜ್ ಮತ್ತು ಮನಮೋಹನ್ ಸಿಂಗ್ ವರೆಗೆ ಸ್ವಾತಂತ್ರ್ಯ ನಂತರ ನೂರಾರು ನಾಯಕರು ಕಾಂಗ್ರೆಸ್ ನಲ್ಲಿ ಇದ್ದರು ಎಂದು ಸರಣಿ ಟ್ವೀಟ್ ಮೂಲಕ ಚಿದಂಬರಂ ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನಿ ಮೋದಿಯವರ ಸ್ಮರಣೆಗೆ ಎಂದು ಟ್ವೀಟ್ ನಲ್ಲಿ ಆರಂಭಿಸಿದ ಅವರು 1947 ನಂತರ ಆಚಾರ್ಯ ಕೃಪಲಾನಿ , ಪಟ್ಟಾಭಿ ಸೀತ ರಾಮಯ್ಯ, ಪುರುಷೋತ್ತಮ ಟೆಂಡರ್, ಯು ಎನ್ ದೇಬರ್, ಸಂಜೀವರೆಡ್ಡಿ, ಸಂಜೀವಯ್ಯ ಕಾಮರಾಜ್ , ನಿಜಲಿಂಗಪ್ಪ , ಶ್ರೀ ಸುಬ್ರಹ್ಮಣ್ಯ ,ಜಗಜೀವನ್ ರಾವ್, ಶಂಕರ್ ದಯಾಳ್ ಶರ್ಮ ,ಡಿಕೆ ಬಾರೂಹ್, ಬ್ರಹ್ಮಾನಂದ ರೆಡ್ಡಿ ,ಪಿ ವಿ ನರಸಿಂಹರಾವ್ ಮತ್ತು ಸೀತಾರಾಮ್ ಕೇಸರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ಹೆಸರಿನ ಪಟ್ಟಿ ಮಾಡಿ ಮೋದಿ ಗೆ ಉತ್ತರಿಸಿದ್ದಾರೆ.
ಮೋದಿಯವರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಬಗ್ಗೆ ಮೋದಿ ಅವರು ಯಾವಾಗಲೂ ಕುತೂಹಲ ಇರಿಸಿಕೊಂಡಿದ್ದಾರೆ, ಆ ಬಗ್ಗೆ ಮಾತುಕತೆಯಲ್ಲಿ ಬಹುಪಾಲು ಸಮಯ ಕಳೆಯುತ್ತಾರೆ ,ಅದರ ಬದಲಾಗಿ ದೇಶದ ಪ್ರಧಾನಿಯಾಗಿ ಅರ್ಧ ಸಮಯವನ್ನಾದರೂ ನೋಟುಗಳ ಅಪನಗದೀಕರಣ ,ಜಿ ಎಸ್ ಟಿ ,ರಫೆಲ್ ಯುದ್ದವಿಮಾನ ಒಪ್ಪಂದ ,ಸಿಬಿಐ ಮತ್ತು ಆರ್ ಬಿಐ ಬಗ್ಗೆ ಮಾತನಾಡಿದ್ದು ಇದೆಯೇ? ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಅತ್ಯಾಚಾರ ನಡೆಯುತ್ತಿದೆ ಭಯೋತ್ಪಾದಕರ ದಾಳಿ ಹೆಚ್ಚಾಗಿದೆ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು ಅನವಶ್ಯಕ ವಿಷಯಗಳ ಬಗ್ಗೆ ಪ್ರಧಾನಿಯವರು ತಲೆ ಕೆಡಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೇಲೆ ಹರಿಹಾಯ್ದಿದ್ದಾರೆ