ಐಪಿಎಲ್ 2018: ಬ್ರಾವೋ ಸ್ಫೋಟಕ ಬ್ಯಾಟಿಂಗ್’ಗೆ ತಲೆಬಾಗಿದ ಮುಂಬೈ, ಚೆನ್ನೈಗೆ ರೋಚಕ ಜಯ!
ನ್ಯೂಸ್ ಕನ್ನಡ ವರದಿ: ಐಪಿಎಲ್ ನ ಆರಂಭಿಕ ಪಂದ್ಯದಲ್ಲಿ ಮುಂಬೈನ ತಂಡವನ್ನು ಸೋಲಿಸುವ ಮೂಲಕ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ. ಚೆನ್ನೈ 1 ವಿಕೆಟ್ ನಿಂದ ಮುಂಬೈ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ 166 ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ವಿಕೆಟ್ ಗಳನ್ನೂ ಕಳೆದುಕೊಂಡು ನಂತರ ನಿಧಾನಗತಿಯ ಆಟಕ್ಕೆ ಶರಣಾಯಿತು ನಂತರ ಬಂದ ಬ್ರಾವೊ ಹೊಡಿ ಬಡಿ ಆಟವಾಡಿ ಭರ್ಜರಿ ಅರ್ಧ ಶತಕ ಸಿಡಿಸಿ ಚೆನ್ನೈ ಗೆಲುವಿನ ರೂವಾರಿಯೆನಿಸಿದರು. 19 ನೇ ಓವರ್ ನ ಅಂತಿಮ ಎಸೆತದಲ್ಲಿ ಎಸೆತದಲ್ಲಿ ಬ್ರಾವೊ 68 ರನ್ ಗಳಿಸಿ ಔಟಾದರು. ಕೊನೆಯ ಓವರ್ ನಲ್ಲಿ ಚೆನ್ನೈಗೆ ಗೆಲ್ಲಲು 7 ರನ್ ಬೇಕಾಗಿತ್ತು. ಪಂದ್ಯ ಕುತೂಹಲ ಘಟ್ಟ ತಲುಪಿದಾದ ಕೇದಾರ್ ಜಾಧವ್ 1 ಸಿಕ್ಸ್ ಮತ್ತು ಫೋರ್ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಪರ ಕ್ಯಾಪ್ಟನ್ ರೋಹಿತ್ ಶರ್ಮ 15 ರನ್ ಗಳಿಸಿ ಔಟಾದರೆ ಇಶನ್ ಕಿಶನ್(40), ಸೂರ್ಯ ಕುಮಾರ್ ಯಾದವ್(43) ಮತ್ತು ಪಾಂಡ್ಯ 22, ಕ್ರನಾಲ್ ಅಜೇಯ 41 ರನ್ ಗಳಿಸಿದರು. ಚೆನ್ನೈ ಪರ ಆಲ್ರೌಂಡರ್ ಶೇನ್ ವ್ಯಾಟ್ಸನ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು. ಚೆನ್ನೈ ಪರ ನಾಯಕ ಧೋನಿ 5, ವ್ಯಾಟ್ಸನ್ 16, ರಾಯುಡು 22, ರೈನಾ 4, ಕೇದಾರ್ ಜಾಧವ್ 24 ಮಾತು ಜಾಡೇಜಾ 12 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ :
ಮುಂಬೈ ಇಂಡಿಯನ್ಸ್ : 165/4
ಚೆನ್ನೈ ಸೂಪರ್ ಕಿಂಗ್ಸ್ : 169/9 (19.5/20 ov, target 166)