ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಭಾರತೀಯರಲ್ಲ!

ನ್ಯೂಸ್ ಕನ್ನಡ ವರದಿ(25.12.18):ಭಾರತ ದೇಶದ ನಾಗರಿಕರು ಪ್ರಜಾಪ್ರಭುತ್ವದ ಅಡಿಯಲ್ಲಿ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಿಳಿಯದ ವಿಷಯವೊಂದಿದೆ. ಭಾರತದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬಂದಿರುವ ಹಲವಾರು ಬಾಲಿವುಡ್ ತಾರೆಯರು ಭಾರತೀಯರೇ ಅಲ್ಲ ಎನ್ನುವ ವಿಷಯವು ಹಲವರಿಗೆ ತಿಳಿದಿಲ್ಲ. ಇದೀಗ ವಿದೇಶಿ ಪೌರತ್ವವನ್ನು ಹೊಂದಿರುವ ಹಾಗೂ ಭಾರತದಲ್ಲಿ ಮತ ಚಲಾಯಿಸಲು ಸಾಧ್ಯವಿರದ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಹೀಗಿದೆ.

ಅಕ್ಷಯ್ ಕುಮಾರ್: ಅಕ್ಷಯ್ ಕುಮಾರ್ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದವರು. ಇದು ಮಾತ್ರವಲ್ಲದೇ ವೀಕ್ಷಕರ ದೇಶಪ್ರೇಮವನ್ನು ಬಡಿದೆಬ್ಬಿಸುವ ಹಲವಾರು ಚಿತ್ರಗಳಲ್ಲಿ ಅಕ್ಷಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಪಂಜಾಬ್ ನ ಅಮೃತಸರದಲ್ಲಿ ಹುಟ್ಟಿ, ದೆಲಿಯಲ್ಲಿ ಬೆಳೆದವರು. ಬಳಿಕ ಮಾರ್ಷಲ್ ಆಟ್ಸ್ ಕಲಿಯುವ ಸಲುವಾಗಿ ಬ್ಯಾಂಕಾಕ್ ಗೆ ತೆರಳಿದರು. ಸದ್ಯ ಅಕ್ಷಯ್ ಕುಮಾರ್ ಗೆ ಕೆನಡಾ ದೇಶವು ಗೌರವ ಪೌರತ್ವವನ್ನು ನೀಡಿದ್ದು, ಎರಡು ದೇಶದಲ್ಲಿ ಒಂದೇ ವೇಳೆಗೆ ಪೌರತ್ವ ಪಡೆಯುವ ನಿಯಮ ಭಾರತದಲ್ಲಿ ಇಲ್ಲದ ಕಾರಣ, ಭಾರತೀಯ ಪೌರತ್ವವನ್ನು ಕೈಬಿಟ್ಟ ಅಕ್ಷಯ್ ಕೆನಡಾದ ಅಧಿಕೃತ ಪ್ರಜೆಯಾದರು.

ದೀಪಿಕಾ ಪಡುಕೋಣೆ: ಬಿಎಂಸಿ ಚುನಾವಣೆಯಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಮತ ಚಲಾವಣೆ ಮಾಡಿದರೆ, ಇತ್ತ ದೀಪಿಕಾ ಪಡುಕೋಣೆಯವರನ್ನು ಕಾಣಲೇ ಇಲ್ಲ. ಯಾಕೆಂದರೆ ಅವರಿಗೂ ಭಾರತದಲ್ಲಿ ಮತ ಚಲಾವಣೆ ಮಾಡುವ ಹಕ್ಕಿಲ್ಲ. ದೀಪಿಕಾ ಬಳಿ ಇರುವುದು ಡ್ಯಾನಿಶ್ ಪಾಸ್ ಪೋರ್ಟ್ ಅಂದರೆ ದೀಪಿಕಾ ಹುಟ್ಟಿದ್ದು ಡೆನ್ಮಾರ್ಕ್ ನ ಕೋಪನ್ ಹೇಗನ್ ನಲ್ಲಿ, ಬಳಿಕ ಬೆಳೆದದ್ದು ಮಾತ್ರ ಕರ್ನಾಟಕದ ಬೆಂಗಳೂರಿನಲ್ಲಾಗಿದೆ. ಸದ್ಯ ದೀಪಿಕಾ ಡೆನ್ಮಾರ್ಕ್ ಪೌರತ್ವ ಹೊಂದಿದ್ದಾರೆ.

ಆಲಿಯಾ ಭಟ್: ಆಲಿಯಾ ಭಟ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ರ ಪುತ್ರಿಯಾಗಿದ್ದಾರೆ. ಹಲವಾರು ಚಿತ್ರಗಳಲ್ಲಿ ತಮ್ಮ  ಅಭಿನಯದಿಂದ ಕನಮನ ಗೆದ್ದ ನಟಿ ಇವರು. ಇವರ ತಾಯಿ ಸೋನಿ ರಝ್ದಾನ್ ಬ್ರಿಟಿಷ್ ಪೌರತ್ವ ಹೊಂದಿದವರಾಗಿದ್ದು, ಅದರಂತೆಯೇ ಆಲಿಯಾ ಭಟ್ ಕೂಡಾ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ.

ಇಮ್ರಾನ್ ಖಾನ್: ಬಾಲಿವುಡ್ ನ ಖ್ಯಾತ ನಟ ಅಮೀರ್ ಖಾನ್ ರ ಸಂಬಂಧಿಯಾಗಿರುವ ಇಮ್ರಾನ್ ಖಾನ್ ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಮ್ರಾನ್ ಖಾನ್ ಸದ್ಯ ಅಮೆರಿಕನ್ ಪಾಸ್ ಪೋರ್ಟ್ ಹೊಂದಿದ್ದು, ಭಾರತೀಯ ಪ್ರಜೆಯಲ್ಲ.

ಕತ್ರೀನಾ ಕೈಫ್:

ಬಾಲಿವುಡ್ ನಲ್ಲಿ ತನ್ನ ದೇಹಸಿರಿಯಿಂದ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕತ್ರೀನಾ ಕೈಫ್ ಭಾರತೀಯ ಪ್ರಜೆಯಲ್ಲ. ಕತ್ರೀನಾ ಬ್ರಿಟಿಷ್ ಪ್ರಜೆಯಾಗಿದ್ದು, ಬಾಲಿವುಡ್ ನಲ್ಲಿ ನೆಲೆ ಕಂಡುಕೊಂಡ ಬಳಿಕ ಹಿಂದಿ ಭಾಷೆಯನ್ನು ಕಲಿತುಕೊಂಡಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್: ಜಾಕ್ವೆಲಿನ್ ಫೆರ್ನಾಂಡಿಸ್ ಶ್ರೀಲಂಕನ್ ಬ್ಯೂಟಿ ಕಂಟೆಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿ ಮೂಡಿ ಬಂದು ಬಾಲಿವುಡ್ ಪ್ರವೇಶ ಮಾಡಿದವರು. ಇವರು ಶ್ರೀಲಂಕಾ ದೇಶದ ಪೌರತ್ವ ಹೊಂದಿದ್ದಾರೆ.

ನರ್ಗೀಸ್ ಫಕ್ರಿ: ಬಾಲಿವುಡ್ ನ ಖ್ಯಾತ ನಟಿ ನರ್ಗೀಸ್ ಫಕ್ರಿ ಅಮೆರಿಕಾ ದೇಶದ ಪೌರತ್ವ ಹೊಂದಿದ್ದಾರೆ.

ಸನ್ನಿ ಲಿಯೋನ್: ಸನ್ನಿ ಲಿಯೋನ್ ರ ಮೊದಲ ಹೆಸರು ಕರಣ್ ಜಿತ್ ಕೌರ್ ಎಂದಾಗಿತ್ತು. ಸದ್ಯ ಭಾರತದಲ್ಲಿ ನೆಲೆಸಿ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ಕೆನಡಾ ದೇಶದ ಪೌರತ್ವ ಹೊಂದಿದ್ದಾರೆ.

Leave a Reply

Your email address will not be published. Required fields are marked *