ಕಾಂಗ್ರೆಸ್ ಆಡಳಿತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೇಗೆ ಇವಿಎಂ ಹ್ಯಾಕ್ ಮಾಡಲು ಸಾಧ್ಯ?: ಕೇಂದ್ರ ಸಚಿವ ಅರುಣ್ ಜೇಟ್ಲಿ

ನ್ಯೂಸ್ ಕನ್ನಡ ವರದಿ: ಪ್ರತಿ ಬಾರಿ ಚುನಾವಣೆ ಸೋತಾಗ ಇವಿಎಂ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್​ನ ಕಾಯಕವಾಗಿದೆ. ಆದರೆ ಗೆದ್ದಾಗ ಮಾತ್ರ ಇವಿಎಂ ನೆನಪಾಗುವುದಿಲ್ಲ. ಸೋಲಿನ ಮುನ್ಸೂಚನೆ ಸಿಕ್ಕಿರುವುದರಿಂದ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟೀಕೆ ಮಾಡಿದ್ದಾರೆ. ಬ್ಯಾಲೆಟ್ ಪೇಪರ್ ಬಳಕೆ ವೇಳೆ ಹೇಗೆಲ್ಲ ಅಕ್ರಮಗಳು ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದೇ ಅಕ್ರಮ ಮುಂದುವರಿಸಲು ಇಷ್ಟೆಲ್ಲ ನಾಟಕ ಮಾಡಲಾಗುತ್ತಿದೆ. ಸುಪ್ರೀಂಕೋರ್ಟ್ ಕೂಡ ಇವಿಎಂ ಸುರಕ್ಷತೆ ಬಗ್ಗೆ ಸಮಾಧಾನ ಹೊಂದಿದೆ ಎಂದಿದ್ದರು.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ರಫೇಲ್ ಒಪ್ಪಂದ, ಉದ್ಯಮಿಗಳ ಸಾಲಮನ್ನಾದ ಸುಳ್ಳಿನ ಬಳಿಕ ಕಾಂಗ್ರೆಸ್ ನಾಯಕರು ಇವಿಎಂ ಕಥೆ ಹೆಣೆಯುತ್ತಿದ್ದಾರೆ. ಯುಪಿಎ ಆಡಳಿತದಲ್ಲಿ ನಡೆದ ಚುನಾವಣೆಗಳಲ್ಲಿ ಇವಿಎಂ ತಯಾರಿಯಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಸರ್ಕಾರಿ ಸಿಬ್ಬಂದಿ, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್’ನಲ್ಲಿ ಈ ಕುರಿತು ಸರಣಿ ಟ್ವೀಟ್ ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 

 

Leave a Reply

Your email address will not be published. Required fields are marked *