ಕುಮಾರಸ್ವಾಮಿಗೆ ಹಾಸನ ಬಿಟ್ಟು ಬೇರೆ ಜಿಲ್ಲೆಯೇ ನೆನಪಾಗಲಿಲ್ಲ: ಯಡಿಯೂರಪ್ಪ
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್ ನಲ್ಲಿ ಹಲವಾರು ಕ್ಷೇತ್ರಗಳ ಕುರಿತು ಹೇಳಲೇ ಇಲ್ಲ. ಪ್ರಮುಖ ವಿಷಯಗಳನ್ನು ಕುಮಾರಸ್ವಾಮಿ ಉಲ್ಲೇಖ ಮಾಡಲಿಲ್ಲ. ಈ ಕುರಿತು ಮಾತನಾಡಿದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ನಾವು ಏಳು ಎಂಟು ತಿಂಗಳೂಗಳಿಂದ ಕಾಯುತ್ತಿದ್ದೆವು. ಕ್ರಾಂತಿಕಾರಿ ಬಜೆಟ್ ಮಂಡನೆ ಮಾಡಬಹುದು ಅಂದುಕೊಂಡಿದ್ದೆವು. ಆದರೆ ಅದು ಸಂಪೂರ್ಣ ಸುಳ್ಳಾಗಿದೆ. ಕುಮಾರಸ್ವಾಮಿ ಅವರಿಗೆ ಹಾಸನ ಬಿಟ್ಟು ಮತ್ತೆ ಬೇರೆ ಜಿಲ್ಲೆ ನೆನಪಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕಿಡಿಕಾರಿದರು.
ದೋಸ್ತಿ ಸರ್ಕಾರದ ಎರಡನೇ ಬಜೆಟ್ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಕುಮಾರಸ್ವಾಮಿ ಅವರು 3ನೇ ಬಜೆಟ್ ಮಂಡಿಸಿದ್ದಾರೆ. ಹಿಂದಿನ ಬಜೆಟ್ನ ಶೇ.35ರಷ್ಟು ಖರ್ಚು ಮಾಡಿಲ್ಲ ಎಂದು ಟೀಕಿಸಿದರು. ಸಿಎಂ ಎಚ್ಡಿಕೆಯ ಇಂತಹ ಬಜೆಟ್ ಅನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.