ಸಿದ್ದರಾಮಯ್ಯ ಮಾಜಿಯಾದರೂ ಈಗಲೂ ನನಗೆ ಸಿಎಂ ಎಂದ ಸ್ಪೀಕರ್ ರಮೇಶ್ ಕುಮಾರ್: ಕಾರಣವೇನು? ಓದಿ.

ನ್ಯೂಸ್ ಕನ್ನಡ ವರದಿ: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಬೊಬ್ಬುಲಿ ಪುಲಿ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಬಣ್ಣಿಸಿದರು. ನನ್ನ ಹುಲಿ ಅವತಾರ ಮುಗಿದು ಬಹಳ ಕಾಲವಾಗಿದೆ. ಆದರೆ, ಸಿದ್ದರಾಮಯ್ಯ ಅವರ ಖದರ್‌ ಇಂದಿಗೂ ಅದೇ ರೀತಿ ಇದೆ ಎಂದು ಗುಣಗಾನ ಮಾಡಿದ್ದಾರೆ.

ಮಾತಿನಲ್ಲಿ ಒರಟನಾದ್ರೂ ಸಿದ್ದರಾಮಯ್ಯರ ಮನಸು ಬಹಳ ಮೃದು. ಸಿದ್ದರಾಮಯ್ಯ ಹಾಗೂ ದೇವರಾಜು ಅರಸು ಅವರ ನಡುವೆ ಸಾಮ್ಯತೆಗಳಿವೆ. ದೇವರಾಜು ಅರಸು ನನ್ನ ರಾಜಕೀಯ ಗುರುಗಳು. ಅವರಲ್ಲಿದ್ದ ಜಾತ್ಯತೀತ ಮನೋಭಾವ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ನಾನು ನನ್ನ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳ ಹಿಂದೆ ಸಿದ್ದರಾಮಯ್ಯನವರ ಶ್ರಮವಿದೆ ಎಂದರು. ಹಾಗಾಗಿ ಸಿದ್ದರಾಮಯ್ಯನವರೇ ನನಗೆ ನಾಯಕ. ಮಾಜಿ ಮುಖ್ಯಮಂತ್ರಿಗಳಾದರೂ ನನಗೆ ಅವರೇ ಮುಖ್ಯಮಂತ್ರಿಗಳು. ಅವರೇ ನಮ್ಮ ಮುಖಂಡರು ರಮೇಶ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *