ಹುತಾತ್ಮ ಯೋಧನಿಗೆ ಮಧ್ಯಪ್ರದೇಶ ಸರ್ಕಾರ ₹1ಕೋಟಿ ಪರಿಹಾರ, ಕರ್ನಾಟಕ ಸರ್ಕಾರದಿಂದ ಕೇವಲ ₹25ಲಕ್ಷ!
ನ್ಯೂಸ್ ಕನ್ನಡ ವರದಿ: ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತ ಮಟ್ಟ ಮಧ್ಯಪ್ರದೇಶದ ವೀರ ಯೋಧ ಅಶ್ವಿನಿ ಕುಮಾರ್ (36) ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಯೋಧನ ವೀರ ಮರಣದ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು, ಕುಟುಂಬಸ್ಥರಿಗೆ ಸಂತ್ವಾನ ತಿಳಿಸಿದ್ದಾರೆ. ಅಲ್ಲದೇ ಸರ್ಕಾರದಿಂದ ಒಂದು ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ.
ಆದರೆ ಕರ್ನಾಟಕ ಸರಕಾರ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಕೇವಲ ₹25ಲಕ್ಷ ಪರಿಹಾರ ನೀಡಿದ್ದು, ಮುಖ್ಯಮಂತ್ರಿ ಘೋಷಿಸಿದ ಈ ಪರಿಹಾರ ತುಂಬಾ ಕಮ್ಮಿಯಾಯಿತು ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್, ಕ್ರೀಡಾಪಟುಗಳಿಗೆ ಕೋಟಿಗಟ್ಟಲೆ ನೀಡುತ್ತಾರೆ, ಆಪರೇಷನ್ ಕಮಲ ಎಂದು ಕೋಟಿ ಕೋಟಿ ಡೀಲ್ ನಡೆಸುತ್ತಾರೆ, ಆದರೆ ಭಯೋತ್ಪಾದಕರ ದಾಳಿಗೆ ಬಲಿಯಾದ ಯೋಧನ ಕುಟುಂಬಕ್ಕೆ ಕೇವಲ ₹25 ಲಕ್ಷ ಕೊಟ್ಟು ಸುಮ್ಮನಾಗುವುದು ಯಾಕೆ? ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವೇ ₹1ಕೋಟಿ ಕೊಡುವಾಗ ರಾಜ್ಯದ ಕಾಂಗ್ರೆಸ್ ನಾಯಕರು ಯಾಕೆ ಈ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರು ಮಧ್ಯ ಪ್ರವೇಶಿಸಿ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ.
ಕೇಜ್ರೀವಾಲ್ ನೇತೃತ್ವದ ದೆಹಲಿ ಸರಕಾರ ಹಲವು ವರ್ಷಗಳ ಹಿಂದೆಯೇ ಹುತಾತ್ಮರಾದ ಯೋಧರಿಗೆ ಮತ್ತು ಪೋಲಿಸರಿಗೂ ₹1ಕೋಟಿ ಪರಿಹಾರ ನೀಡುವ ಕೆಲಸ ಮಾಡುತ್ತಿದೆ, ಮೃತರ ಕುಟುಂಬಕ್ಕೆ ಆರ್ಥಿಕವಾಗಿ ಸಧೃಡವಾಗಲು ಸಹಕರಿಸುತ್ತಿದೆ, ನಮ್ಮ ಸರಕಾರವೂ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸತತ ಕೂಗು ಕೇಳಿಬರುತ್ತಿದೆ.