ಭಾರತೀಯ ವಾಯುಪಡೆಗೆ ಟ್ವೀಟ್ ಮೂಲಕ ಸೆಲ್ಯೂಟ್ ಸಲ್ಲಿಸಿದ ರಾಹುಲ್ ಗಾಂಧಿ !
ನ್ಯೂಸ್ ಕನ್ನಡ ವರದಿ : ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್’ಸ್ಟ್ರೈಕ್ (ವೈಮಾನಿಕ ದಾಳಿ) ಮಾಡಿದೆ.ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು ಬಾಂಬ್ ದಾಳಿ ಮಾಡಿದ್ದು ಪರಿಣಾಮ 500 ಮೀಟರ್ ಪ್ರದೇಶ ಸಂಪೂರ್ಣ ಸರ್ವನಾಶವಾಗಿದೆ ಎಂದು ತಿಳಿದುಬಂದಿದೆ. ಈ ಮಹತ್ತರ ಕಾರ್ಯಕ್ಕೆ ಭಾರತೀಯ ವಾಯುಪಡೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸೆಲ್ಯೂಟ್ ಸಲ್ಲಿಸಿದ್ದಾರೆ.
ಭಾರತೀಯ ವಾಯುಪಡೆಗೆ ಟ್ವೀಟ್ ಮೂಲಕ ಶ್ಲಾಘಿಸಿರುವ ರಾಹುಲ್, ಭಾರತೀಯ ವಾಯುಪಡೆಯ ಪೈಲಟ್ಗಳಿಗೆ ನನ್ನ ಸೆಲ್ಯೂಟ್ ಎಂದು ಒಂದು ವಾಕ್ಯದಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಭೀಕರ ದಾಳಿಯನ್ನು ಎಲ್ಲ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿದ್ದವು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ಗಡಿಯೊಳಗೆ ನುಗ್ಗಿ, ಉಗ್ರರ ಅಡಗುತಾಣಗಳ ನಾಶ ಮಾಡಿದೆ ಎಂದು ಹೇಳಲಾಗ್ತಿದೆ.